ಉಡುಪಿ: ಗುಂಪುಗಾರಿಕೆ ಮಾಡಿದ ಹೀರೋಗಳು ಜೀರೋ ಆಗಿದ್ದಾರೆ. ಜೀರೋಗಳು ಹೀರೋ ಆಗಿದ್ದಾರೆ. ಜಾತಿ ಮೇಲೆ ರಾಜಕಾರಣ ಮಾಡೋದನ್ನು ಬಿಟ್ ಬಿಡಿ. ಎಲ್ಲರೂ ಒಂದಾಗಿ ಕೆಲಸ ಮಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಚಾಟಿ ಬೀಸಿದ್ದಾರೆ.
ಉಪಮುಖ್ಯಮಂತ್ರಿಯಾದ ನಂತರ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಮೊದಲ ಭೇಟಿಯಲ್ಲೇ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
Advertisement
ಉಡುಪಿಯಲ್ಲಿ 5 ಕ್ಕೆ ಐದು ಸೋಲಿಗೆ ಕಾರಣ ಏನು? ಡಿಕೆ ಶಿವಕುಮಾರ್ ಬಣ ಅಥವಾ ಇನ್ಯಾವುದೋ ನಾಯಕರ ಬಣ ಮಾಡಬೇಡಿ. ಎಲ್ಲರದ್ದೂ ಒಂದೇ ಬಣ, ಅದು ಕಾಂಗ್ರೆಸ್ ಬಣ. ಜಿಲ್ಲಾ ಕಾಂಗ್ರೆಸ್ ಮುಂದಿನ ಮೂರು ತಿಂಗಳಲ್ಲಿ ಎಲ್ಲ ಸರಿ ಆಗಬೇಕು. ಪಕ್ಷ ಸಂಘಟನೆ ಮಾಡಬೇಕು. ಇಲ್ಲವಾದರೆ ಎಲ್ಲವನ್ನು ಬದಲಾವಣೆ ಮಾಡಬೇಕಾಗುತ್ತದೆ ಎಂದಿದ್ದಾರೆ.
Advertisement
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ತತ್ವದಡಿ ಕೆಲಸ ಮಾಡಿ. ಕೆಲ ಸಚಿವರ ನೇತೃತ್ವದಲ್ಲಿ ಒಂದು ಕೋರ್ ಟೀಮ್ ರಚನೆ ಮಾಡುತ್ತೇನೆ. ಸರ್ಕಾರ ಮತ್ತು ಪಕ್ಷ ಜೊತೆಯಾಗಿ ಕೆಲಸ ಮಾಡುವ ಟೀಮ್ ಅದು. ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ನೂರು ಹೊಸ ಕಾಂಗ್ರೆಸ್ ಕಚೇರಿ ತೆರೆದು ಸೇವೆ ಕೊಡಬೇಕು ಎಂದು ತಿಳಿಸಿದ್ದಾರೆ.
Advertisement
ಯೂಥ್ ಕಾಂಗ್ರೆಸ್ ಎಲೆಕ್ಷನ್ ಆಗಿದೆ. ನೀವು ಹಲವು ಜನ ಗೆದ್ದಿದ್ದೀರಿ. ನೀವು ಗೆದ್ದಿರೋದು ಬಿಜೆಪಿ ಮೇಲೆ ಅಲ್ಲ, ಕಾಂಗ್ರೆಸ್ ಪಕ್ಷದ ಒಳಗೆ. ಗೆದ್ದವರು ಸೋತವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಪಕ್ಷದೊಳಗೆ ಗುಂಪುಗಾರಿಕೆ ಮಾಡಬೇಡಿ ಬಿಟ್ ಬಿಡಿ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮಾಡಬೇಡಿ ಎಂದು ಹೇಳಿದ್ದಾರೆ.
Advertisement
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬರ್ತಾ ಇದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ 9 ಸೀಟ್ ಗೆಲ್ಬೇಕು. ಆರು ಮೂರು ತಿಂಗಳು ನೋಡ್ತೀವಿ. ಹೊಸ ಕ್ಯಾಂಡಿಡೇಟ್‌ಗಳನ್ನು ಚೇಂಜ್ ಮಾಡ್ತೀವಿ. ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡುವುದನ್ನು ಬಿಡಿ. ಪಕ್ಷ ಪೂಜೆ ಮಾಡಿ ಎಂದು ಸೂಚಿಸಿದ್ದಾರೆ.