ಬೆಂಗಳೂರು: ಇಂದು ಕನ್ಸ್‌ಟ್ರಕ್ಷನ್ ಕ್ಷೇತ್ರದಲ್ಲಿ ಯಾರು ಬೇಕಾದರೂ ಗುತ್ತಿಗೆದಾರರು ಆಗಬಹುದು. ಆದರೆ ಸಿವಿಲ್ ಎಂಜಿನಿಯಂಗ್‍ನ ಹಿನ್ನೆಲೆ ಹೊಂದಿರುವವರು ಗುತ್ತಿಗೆದಾರರು ಆಗಬೇಕಾಗಿರುವುದು ಅತೀ ಅಗತ್ಯ ಎಂದು ಡಿಸಿಎಂ ಡಾ.ಸಿ.ಎನ್ ಅಶ್ವತ್ಥ್‌ನಾರಾಯಣ್ ಹೇಳಿದ್ದಾರೆ.
Advertisement
ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಸವಾಲುಗಳು ಮತ್ತು ಸಿವಿಲ್ ಇಂಜಿನಿಯರಿಂಗ್ ಅವಕಾಶಗಳ ಕುರಿತು ಎರಡು ದಿನಗಳ ರೆಡೆಕಾನ್ 2020 ಸಮ್ಮೇಳನ ಮತ್ತು ವಿಚಾರ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಅಶ್ವತ್ಥ್‌ನಾರಾಯಣ್ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಸಿವಿಲ್ ಎಂಜಿನಿಯರ್‌ಗಳು ನಡೆಸಬೇಕಾದ ಕಾರ್ಯಗಳು ಅನೇಕ. ನಗರಗಳಲ್ಲಿ ಎಷ್ಟೇ ಅಭಿವೃದ್ಧಿ ನಡೆಸಿದರೂ ಜನರ ಗುಣಮಟ್ಟದ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದಾ ಜನರಿಂದ ಪ್ರಶ್ನೆಗೊಳಗಾಗುತ್ತಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು. ಅದೇ ರೀತಿ ಕೆಟ್ಟ ವಿಚಾರಗಳನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
Advertisement
Advertisement
ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆಂದೇ ಗುತ್ತಿಗೆದಾರರು ಹಾಗೂ ಸರ್ಕಾರವನ್ನು ಹೊರತುಪಡಿಸಿ ಬೇರೆಯೇ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಆದರೆ ಅವರೂ ಇವರೊಂದಿಗೆ ಕಳಪೆ ಕಾಮಗಾರಿಗಳಲ್ಲಿ ಕೈಜೋಡಿಸುತ್ತಿರುವುದು ದುರಂತ. ಹೀಗಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ನಿರ್ಮಾಣ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಲು ವಿದ್ಯೆಯ ಜೊತೆಗೆ ಅನುಭವ ಕೌಶಲ್ಯ ಅತ್ಯಗತ್ಯ ಎಂದರು. ಸಿವಿಲ್ ಎಂಜಿನಿಯರ್‌ಗಳ ಸಂಘಕ್ಕೆ ಉದ್ಯೋಗ ಕೌಶಲ್ಯಕ್ಕೆ ಸಂಭಂದಿಸಿದಂತೆ ಯಾವುದೇ ಸಹಾಯ ಅಗತ್ಯವಿದ್ದಲ್ಲಿ ಸರ್ಕಾರ ಸದಾ ಸಿದ್ಧವಿರುತ್ತದೆ ಎಂದು ಭರವಸೆ ನೀಡಿದರು. ಹಾಗೆಯೇ ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಭಿವೃದ್ಧಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಇಲ್ಲಿನ ವ್ಯವಸ್ಥೆಗಳೂ ಪ್ರಮುಖ ಕಾರಣವಾಗಿದೆ ಎಂದರು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಯು ಅಶ್ವಥ್ ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚುತ್ತಿದ್ದಂತೆ ಅವಕಾಶಗಳ ಜೊತೆಗೆ ಸವಾಲುಗಳು ಹೆಚ್ಚಾಗುತ್ತಿವೆ. ಸರ್ಕಾರ ಸಿವಿಲ್ ಎಂಜಿನಿಯರ್‌ಗಳ ಜೊತೆ ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ದಿನಗಳ ಸಮಾವೇಶದಲ್ಲಿ ತಂತ್ರಜ್ಞಾನದ ಮೂಲಕ ಎಂಜಿನಿಯರಿಂಗ್ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ, ತಾಂತ್ರಿಕ ಪರಿಣತರಿಂದ 11ಕ್ಕೂ ಹೆಚ್ಚು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಐಒಟಿ, ಬಿಐಎಂ ಇತ್ಯಾದಿ ವಿಚಾರಕ್ಕೆ ಸಂಬಂಧಿಸಿ ಇತ್ತೀಚಿನ ತಾಂತ್ರಿಕತೆಗಳ ಅಭಿವೃದ್ಧಿಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.