ಬೆಂಗಳೂರು: ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ಎಂದು ಬಿಜೆಪಿ ನಾಯಕರು ಹೇಳುತ್ತೇ ಬಂದಿದ್ದಾರೆ. ಈ ಮಧ್ಯೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, 260 ವರ್ಷಗಳ ಘಟನೆ ನೆನೆದು ಮತ್ತೆ ವಿವಾದದ ಕಿಡಿ ಹಚ್ಚಿದ್ದಾರೆ.
ಅಶ್ವಥ್ ನಾರಾಯಣ್ ಅವರು ಟ್ವೀಟ್ ಮಾಡಿ, ಎರಡು ಶತಮಾನಗಳ ಹಿಂದೆ ಇದೇ ನರಕ ಚತುರ್ದಶಿಯ ದಿನ, ಮತಾಂಧ ಟಿಪ್ಪು ಸುಲ್ತಾನನ ಕ್ರೌರ್ಯ, ಅಟ್ಟಹಾಸಕ್ಕೆ ಅಸಹಾಯಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 800 ಮುಗ್ಧ ಜನರು ಬಲಿಯಾದರು. ದೇಶದೆಲ್ಲೆಡೆ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದರೆ, ನಮ್ಮ ರಾಜ್ಯದ ಮೇಲುಕೋಟೆಯಲ್ಲಿ ದೀಪಾವಳಿಯ ಸಂಭ್ರಮವಿಲ್ಲದೇ ಕತ್ತಲು ಆವರಿಸುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ
Advertisement
ಈ ಹೃದಯವಿದ್ರಾವಕ ಘಟನೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಾರದು, ನಮ್ಮ ಸಾಮೂಹಿಕ ನೆನಪಿನಿಂದ ಮಾಸಬಾರದು. ಮೇಲುಕೋಟೆ ಹತ್ಯಾಕಾಂಡದ ಹುತಾತ್ಮರನ್ನು ಇಂದು ನಾವೆಲ್ಲರೂ ನೆನೆಯೋಣ.
— Dr. Ashwathnarayan C. N. (@drashwathcn) October 27, 2019
Advertisement
ಮತ್ತೊಂದು ಟ್ವೀಟ್‍ನಲ್ಲಿ, ಈ ಹೃದಯವಿದ್ರಾವಕ ಘಟನೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಾರದು. ನಮ್ಮ ಸಾಮೂಹಿಕ ನೆನಪಿನಿಂದ ಮಾಸಬಾರದು. ಮೇಲುಕೋಟೆ ಹತ್ಯಾಕಾಂಡದ ಹುತಾತ್ಮರನ್ನು ಇಂದು ನಾವೆಲ್ಲರೂ ನೆನೆಯೋಣ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಜಯಂತಿ ರದ್ದಿಗೆ ಬಿಜೆಪಿಯಲ್ಲೇ ಅಪಸ್ವರ
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿದ್ದರು. ಆದರೆ ಇದಕ್ಕೆ ಬಿಜೆಪಿ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಬಿಗಿ ಭದ್ರತೆಯಲ್ಲಿಯೇ ಟಿಪ್ಪು ಜಯಂತಿ ಆಚರಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.