ಬೆಳಗಾವಿ: ಡಿಸಿಸಿ ಬ್ಯಾಂಕಿನ ಮುರಗೋಡ ಶಾಖೆಗೆ ಕನ್ನ ಹಾಕಿರುವ ಕಳ್ಳರು ನಗದು, ಚಿನ್ನ ಸೇರಿ 6 ಕೋಟಿ ಮೌಲ್ಯದ ವಸ್ತುಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ರಾತ್ರಿ ಬೀಗ ಮುರಿದು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.
4.41 ಕೋಟಿ ರೂ. ನಗದು, 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿವೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಮುರಗೋಡ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್
Advertisement
Advertisement
ರಾಜ್ಯದ ಜಿಲ್ಲಾ ಸಹಕಾರ ಬ್ಯಾಂಕ್‍ಗಳ ಪೈಕಿ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅತಿ ಹೆಚ್ಚು ಲಾಭದಲ್ಲಿದೆ. ನೂರು ವರ್ಷ ಪೂರೈಸಿರುವ ಈ ಬ್ಯಾಂಕ್ ಜಿಲ್ಲೆಯಲ್ಲಿ 100 ಶಾಖೆಗಳಿವೆ. ರೈತರ ಪಾಲಿನ ಆಶಾಕಿರಣವಾಗಿರುವ ಈ ಬ್ಯಾಂಕ್ ಠೇವಣಿ ಸಂಗ್ರಹ ಹಾಗೂ ಚಿನ್ನದ ಮೇಲೂ ಸಾಲ ನೀಡುತ್ತಿದೆ. ಠೇವಣಿ ಇಟ್ಟಿದ್ದ 4 ಕೋಟಿ 41 ಲಕ್ಷ ರೂಪಾಯಿ ನಗದು, ಅಡವಿಟ್ಟಿದ್ದ 1.5 ಕೋಟಿ ಮೌಲ್ಯದ ಚಿನ್ನಾಭರಣಗಳೀಗ ಕಳ್ಳತನವಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ
Advertisement
Advertisement
ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಬಿಡಿಸಿಸಿ ಬ್ಯಾಂಕ್‍ನಲ್ಲಿ ಆಗಿರುವ ಕಳ್ಳತನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳ್ಳತನವಾದ ಬ್ಯಾಂಕ್‍ನಲ್ಲಿ ಯಾವುದೇ ಕೀ ಗಳನ್ನು ಒಡೆಯದೇ ಇರುವುದು ಪತ್ತೆಯಾಗಿದೆ. ಇತ್ತ ಬ್ಯಾಂಕ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವೈಸ್‍ನ್ನು ಕಳ್ಳತನ ಮಾಡಲಾಗಿದೆ. ಇತ್ತ ಮುರಗೋಡ ಡಿಸಿಸಿ ಬ್ಯಾಂಕ್‍ನಲ್ಲಿ 50 ಲಕ್ಷ ಹಣ ಮಿತಿ ಇರಿಸಲಾಗಿತ್ತು. 50 ಲಕ್ಷಕ್ಕೆ ಮಾತ್ರ ಇನ್ಸುರೆನ್ಸ್ ಮಾಡಿಸಲಾಗಿತ್ತು. ಆದರೆ, ಬ್ಯಾಂಕ್‍ನಲ್ಲಿ ಇಷ್ಟು ಹಣವನ್ನು ಹೇಗೆ ಇಟ್ಟುಕೊಂಡಿದ್ದರು ಎಂಬ ಪ್ರಶ್ನೆ ಉದ್ಭವಾಗಿದೆ.