ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್‌ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ ಅನಿಕೇತ್‌ ಔಟ್‌

Public TV
2 Min Read
DC vs SRH IPL 2025 What a unbelievable Catch from Fraser McGurk aT THE BOUNDARY

ವಿಶಾಖಪಟ್ಟಣ: ಸನ್‌ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (Jake Fraser-McGurk) ಅದ್ಭುತವಾದ ಕ್ಯಾಚ್‌ ಹಿಡಿದು ಎಲ್ಲರನ್ನೂ ನಿಬ್ಬೆರಾಗಿಸಿದ್ದಾರೆ.

ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಬಂಡೆಯಂತೆ ನಿಂತು ಅನಿಕೇತ್ ವರ್ಮಾ ಬ್ಯಾಟ್‌ ಬೀಸುತ್ತಿದ್ದರು. 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದರು.

ಕುಲದೀಪ್‌ ಎಸೆದ 16ನೇ ಓವರ್‌ ಐದನೇ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಅನಿಕೇತ್‌ ವರ್ಮಾ ಬಲವಾಗಿ ಬ್ಯಾಟ್‌ ಬೀಸಿದರು. ಈ ಡೀಪ್‌ ಮಿಡ್‌ ವಿಕೆಟ್‌ನಲ್ಲಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಗಾಳಿಯಲ್ಲಿ ಮೇಲಕ್ಕೆ ಹಾರಿ ಕ್ಯಾಚ್‌ ಹಿಡಿದರು. ಒಂದು ವೇಳೆ ಕ್ಯಾಚ್‌ ಹಿಡಿಯದೇ ಇದ್ದರೆ ಸಿಕ್ಸ್‌ಗೆ ಹೋಗುತ್ತಿತ್ತು. ಮೆಕ್‌ಗುರ್ಕ್ ಸರಿಯಾದ ಸಮಯಕ್ಕೆ ಮೇಲಕ್ಕೆ ಜಿಗಿದು 74 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸ್‌) ಸಿಡಿಸಿದ ಅಂಕಿತ್‌ ವರ್ಮಾ ಅವರನ್ನು ಔಟ್‌ ಮಾಡಿ ತಂಡಕ್ಕೆ ದೊಡ್ಡ ರಿಲೀಫ್‌ ನೀಡಿದರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

 

ಈ ಪಂದ್ಯದಲ್ಲೇ ಮೆಕ್‌ಗುರ್ಕ್ ಪ್ಯಾಟ್‌ ಕಮ್ಮಿನ್ಸ್‌ ಅವರ ಕ್ಯಾಚನ್ನು ಬೌಂಡರಿ ಬಳಿಯೇ ಹಿಡಿದಿದ್ದರು. ಇದನ್ನೂ ಓದಿ: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್

ಆಸ್ಟ್ರೇಲಿಯಾ ಮೆಕ್‌ಗುರ್ಕ್ ಈ ರೀತಿ ಕ್ಯಾಚ್‌ ಹಿಡಿಯುವುದು ಇದು ಮೊದಲೆನಲ್ಲ. ಈ ಹಿಂದೆ ಬಿಗ್‌ ಬ್ಯಾಷ್‌ ಲೀಗ್‌ನಲ್ಲೂ ಬೌಂಡರಿ ಬಳಿಯೇ ಕ್ಯಾಚ್‌ ಹಿಡಿದಿದ್ದರು.

Share This Article