ವಡೋದರ: ನಾಯಕಿ ಜೆಮಿಮಾ ರೋಡ್ರಿಗಸ್ (Jemimah Rodrigues) ಅವರ ಅರ್ಧಶತಕದ ಆಟದಿಂದ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ರೋಚಕ 7 ವಿಕೆಟ್‌ಗಳ ಜಯ ಸಾಧಿಸಿದೆ.
ಗೆಲ್ಲಲು 155 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿಇನ್ನು ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 155 ರನ್ ಹೊಡೆಯಿತು. ಎರಡು ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಈಗ 4 ಅಂಕ ಸಂಪಾದಿಸಿದೆ.
ಡೆಲ್ಲಿ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಲಿಜೆಲ್ ಲೀ ಮೊದಲ ವಿಕೆಟಿಗೆ 63 ಜೊತೆಯಾಟವಾಡಿ ಭದ್ರವಾದ ಅಡಿಪಾಯ ಹಾಕಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರಿಕೆಟ್ ಅಂಗಳದಲ್ಲೇ IPL 2026 ಉದ್ಘಾಟನೆ?
A timely MAXIMUM! 💥
Jemimah Rodrigues relieves the pressure, smashing a stunning SIX with a powerful pick-up shot! 👏🏻
Who will win this crunch must-win game? 😮💨#TATAWPL | #DCvMI | LIVE NOW ➡️ https://t.co/moPDf32tLl pic.twitter.com/HqZmdSuosw
— Star Sports (@StarSportsIndia) January 20, 2026
ಶಫಾಲಿ 29 ರನ್(24 ಎಸೆತ, 6 ಬೌಂಡರಿ) ಲಿಜೆಲ್ ಲೀ 46 ರನ್(28 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ನಾಯಕಿ ಜೆಮಿಮಾ ಅಜೇಯ 51 ರನ್( 37 ಎಸೆತ, 5 ಬೌಂಡರಿ, 1 ಸಿಕ್ಸ್), ಮರಿಜಾನೆ ಕಪ್ ಅಜೇಯ 10 ರನ್(6 ಎಸೆತ, 1 ಸಿಕ್ಸ್) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಕೊನೆಯ ಸ್ಥಾನದಲ್ಲಿದ್ದ ಡೆಲ್ಲಿ ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 4 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೆ ಜಿಗಿದಿದೆ.
ಆರ್‌ಸಿಬಿ 10 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದರೆ ಮುಂಬೈ, ಯುಪಿ, ಡೆಲ್ಲಿ, ಗುಜರಾತ್ ತಂಡಗಳು ತಲಾ 4 ಸಂಪಾದಿಸಿದ್ದು, ಅನುಕ್ರಮವಾಗಿ 2 ರಿಂದ 5 ಸ್ಥಾನಗಳನ್ನು ಪಡೆದಿವೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ ನ್ಯಾಟ್ ಸಿವರ್ ಬ್ರಂಟ್ ಅವರ 65 ರನ್(45 ಎಸೆತ, 6 ಬೌಂಡರಿ, 2 ಸಿಕ್ಸ್) ನಾಯಕಿ ಹರ್ಮನ್ ಪ್ರೀತ್ ಕೌರ್ 41 ರನ್(33 ಎಸೆತ, 7 ಬೌಂಡರಿ) ನೆರವಿನಿಂದ 154 ರನ್ ಗಳಿಸಿತ್ತು.

