ಬೀದರ್: 3423 ಚುನಾಯಿತ ಮತದಾರು ಪರಿಷತ್ ಚುನಾವಣೆಗೆ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಮಾಹಿತಿ ನೀಡಿದರು.
ವಿಧಾನ ಪರಿಷತ್ ಚುನಾವಣೆಯ ದಿನಾಂಕ ಘೋಷಣೆ ಬೆನ್ನಲ್ಲೇ ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಮ್ಮ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಮಾಡಿದ್ದು, ಈ ಕುರಿತು ಮಾಹಿತಿ ನೀಡಿದರು. ಒಂದು ಸ್ಥಾನಕ್ಕೆ ನಡೆಯಲಿರುವ ಎಂಎಲ್‍ಸಿ ಚುನಾವಣೆಗೆ ಬೀದರ್ ಜಿಲ್ಲೆಯಲ್ಲಿ ಒಟ್ಟು 3,423 ಚುನಾಯಿತ ಮತದಾರು ಮತದಾನ ಮಾಡಲಿದ್ದು, ಒಟ್ಟು 192 ಮತಗಟ್ಟೆಗಳಲ್ಲಿ ಈ ಮತದಾನ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ನೆನಪಿನಲ್ಲಿ ರಾಜ್ಯೋತ್ಸವ ಆಚರಣೆ ಮಾಡಿದ ಕನ್ನಡಾಭಿಮಾನಿಗಳು
Advertisement
Advertisement
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಬೀದರ್ ಜಿಲ್ಲೆಯಲ್ಲಿ ತಕ್ಷಣದಿಂದಲ್ಲೆ ನೀತಿ ಸಂಹಿತೆ ಜಾರಿಯಾಗಿದೆ. ಡಿಸೆಂಬರ್ 10 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.
Advertisement
Advertisement
ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಸದಸ್ಯರ ಸ್ಥಾನ ಮುಗಿದಿದೆ ಎಂದು ಸದಸ್ಯರು ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ಫೈನಲ್ ಮತದಾರರ ಅಂಕಿ-ಅಂಶ ನೀಡುತ್ತೇವೆ. ಮಾದರಿ ನೀತಿ ಸಂಹಿತೆಗೆ ಯಾವ ಕಾನೂನುಗಳು ಅನ್ವಯಿಸುತ್ತದೆಯೋ, ಅದು ಎಲ್ಲ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಾಗಿ ಜಾರಿಯಲ್ಲಿರುತ್ತೆ ಎಂದರು. ಇದನ್ನೂ ಓದಿ: ನನ್ನ ನಾಲಿಗೆಯನ್ನು ಪವಿತ್ರವಾಗಿ ಇಟ್ಟುಕೊಂಡಿದ್ದೇನೆ: ಈಶ್ವರಪ್ಪ