– ಜಿಲ್ಲಾಧಿಕಾರಿ ವರ್ತನೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲು ಸಜ್ಜಾದ ದೂರುದಾರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಬಹಿರಂಗ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳದ ಜಿಲ್ಲಾಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮರಿ ಲಿಂಗೇಗೌಡ ಮಾಲೀ ಪಾಟೀಲ್ ಚುನಾವಣಾ ಆಯೋಗದಲ್ಲಿ ದೂರು ನೀಡಲು ನಿರ್ಧರಿಸಿದ್ದಾರೆ.
Advertisement
ಏನಿದು ಆರೋಪ?: ಕಳೆದ ಏಳೆಂಟು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ, ಸತ್ತವರ ವೋಟ್ ಹಾಕಿ ನನ್ನನ್ನು ಗೆಲ್ಲಿಸಿದ್ದೀರ ಎಂದು ಮೈಸೂರಿನಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮರಿ ಲಿಂಗೇಗೌಡ ಮಾಲೀ ಪಾಟೀಲ್ ಚುನಾವಣಾ ಆಯೋಗದಲ್ಲಿ ದೂರು ನೀಡಿದ್ರು. ದೂರಿನ ಹಿನ್ನಲೆಯಲ್ಲಿ ಸತ್ಯಾಸತ್ಯತೆ ತಿಳಿದು ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ತನಿಖೆಗೆ ಆದೇಶ ನೀಡಿ ಆರು ತಿಂಗಳೇ ಕಳೆದ್ರೂ, ಈವರೆಗೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ತಮಗೆ ವಹಿಸಿದ್ದ ಕೆಲಸವನ್ನ ಜಿಲ್ಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಯಾದ ಉಪವಿಭಾಗಾಧಿಕಾರಿ ಹೆಗಲಿಗೆ ಹಾಕಿ ನುಣುಚಿಕೊಂಡಿದ್ದಾರೆ. ಆದ್ರೆ ಈವರೆಗೂ ಯಾವುದೇ ತನಿಖೆಯನ್ನ ನಡೆಸಿಲ್ಲ.
Advertisement
Advertisement
ಇದರಿಂದ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಅನ್ನೋದು ದೂರುದಾರರ ಆರೋಪ. ಜಿಲ್ಲಾಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನಗೊಂಡಿರುವ ದೂರುದಾರ ಮರಿಲಿಂಗೇಗೌಡ ಮಾಲೀ ಪಾಟೀಲ್ ಚುನಾವಣಾ ಆಯೋಗದ ಆದೇಶ ಪಾಲನೆ ಮಾಡದ ಜಿಲ್ಲಾಧಿಕಾರಿಗಳ ವಿರುದ್ಧ ಆಯೊಗದಲ್ಲಿ ದೂರು ನೀಡಲು ನಿರ್ಧರಿಸಿದ್ದಾರೆ.