ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಪಶ್ಚಿಮ ಘಟ್ಟ (Western Ghat) ಭಾಗದಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ಸುದ್ದಿ ʻಪಬ್ಲಿಕ್ ಟಿವಿʼಯಲ್ಲಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ. ಯಾವುದೇ ರೀತಿಯ (Earthquakes) ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ. ಹೀಗಾಗಿ ಜನ ಭಯಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ಸ್ಫೋಟ ನಡೆಸಿಲ್ಲ. ಜನ ಕಳುಹಿಸಿದ ಆಡಿಯೋ ಪರಿಶೀಲನೆ ಮಾಡಿದ್ದೇವೆ. ಭೂ ಕಂಪನವಾದಾಗ ರಿಕ್ಟರ್ ಮಾಪನದಲ್ಲಿ ರೆಕಾರ್ಡ್ ಆಗಬೇಕು, ಯಾವುದೂ ರೆಕಾರ್ಡ್ ಆಗಿಲ್ಲ. ಈ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
- Advertisement -
- Advertisement -
ಶಿರಸಿ ತಾಲೂಕಿನ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ತಾಲೂಕಿನ ಚೌವತ್ತಿ, ಸಿದ್ದಾಪುರ ತಾಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಕುಮಟಾ ಹಾಗೂ ಶಿರಸಿ ತಾಲೂಕಿನ ಗಡಿ ಭಾಗವಾದ ದೇವಿಮನೆ ಘಟ್ಟ ಭಾಗಗಳಲ್ಲಿ ಭೂಕಂಪನದ ಅನುಭವವಾಗಿತ್ತು ಎಂದು ಜನ ಮಾಹಿತಿ ನೀಡಿದ್ದರು. ಹಲವು ಪ್ರತ್ಯಕ್ಷದರ್ಶಿಗಳು ನಾಲ್ಕೈದು ಬಾರಿ ಭೂಮಿ ಕಂಪಿಸಿದೆ ಎಂದರೆ, ಹಲವರು ಗುಡುಗು ಬಂದಂತೆ ಅನುಭವವಾಗಿ ಭೂಮಿ ಕಂಪಿಸಿದೆ ಎಂದು ಹೇಳಿಕೊಂಡಿದ್ದಾರೆ.
- Advertisement -
- Advertisement -
ರಿಕ್ಟರ್ ಮಾಪನದಲ್ಲೂ ದಾಖಲಾಗದೇ ಹೀಗೆ ಕಂಪಿಸಿದ ಅನುಭವ ಆಗಿರುವುದು ಸಾಕಷ್ಟು ಪ್ರಶ್ನೆ ಏಳುವಂತೆ ಮಾಡಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಭಾವದಿಂದ ಭೂಮಿಯ ಆಳದಲ್ಲಿ ಯಾವುದಾದರೂ ದೊಡ್ಡ ಬಂಡೆಕಲ್ಲು ಜಾರುವಂತೆ ಮಾಡಿದೆಯೇ? ಎಂಬ ಬಗ್ಗೆಯೂ ಪ್ರಶ್ನೆ ಎದ್ದಿದೆ. ಈ ಹಿಂದೆ ಘಟ್ಟ ಭಾಗದಲ್ಲಿ ನಿರಂತರವಾಗಿ ಭೂಕುಸಿತ ಸಹ ಆಗಿದೆ. ಹೀಗಾಗಿ ಮತ್ತೆ ಭೂಮಿ ಕುಸಿಯುವ ಮುನ್ಸೂಚನೆಯಾ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.