ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) ಎರಡನೇ ಗ್ಯಾರಂಟಿ ಯೋಜನೆ ಅನ್ನಭಾಗ್ಯಕ್ಕೆ (Anna Bhagya) ಇಂದು ಚಾಲನೆ ಸಿಗಲಿದೆ. ಬಿಪಿಎಲ್ ಕಾರ್ಡ್‌ದಾರರ (BPL Card) ಖಾತೆಗೆ ಹಣ ಹಾಕುವ ಮೂಲಕ ಚಾಲನೆ ಸಿಗಲಿದೆ. ಹಂತಹಂತವಾಗಿ ಖಾತೆಗೆ ಹಣ ಹಾಕುವ ಪ್ಲ್ಯಾನ್ ಅನ್ನು ಆಹಾರ ಇಲಾಖೆ ಮಾಡಿಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ. ಅನ್ನಭಾಗ್ಯ ಯೋಜನೆ ಜುಲೈ ಒಂದರಿಂದಲೇ ಜಾರಿ ಆಗಬೇಕಿತ್ತು. ಅಕ್ಕಿ ಸಿಗದ ಕಾರಣ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯೊಂದಿಗೆ 5 ಕೆಜಿ ಅಕ್ಕಿಗೆ ಹಣ ಹಾಕಲು ಸರ್ಕಾರ ನಿರ್ಧಾರ ಮಾಡಿದೆ. ಈ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: 2 ತಿಂಗಳು ನಾವು ಬಾರ್‌ಗೆ ಹೋಗದಿದ್ರೆ ಸರ್ಕಾರವೇ ಬಿದ್ದು ಹೋಗುತ್ತೆ – ಮದ್ಯಪಾನಪ್ರಿಯರ ಸಂಘದ ರಾಜ್ಯಾಧ್ಯಕ್ಷ
Advertisement
Advertisement
ಸೋಮವಾರ ಕೋಲಾರ ಮತ್ತು ಮೈಸೂರು ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ಅಮೌಂಟ್ ಹಾಕಿ ಜಾರಿ ಮಾಡಲಿದ್ದಾರೆ. ನಂತರ ಮಂಗಳವಾರ ಉಳಿದ ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರಿಗೆ ಹಣ ಹಾಕಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ಧರಿಸಿದೆ.
Advertisement
ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‍ದಾರರಿದ್ದಾರೆ. 1.28 ಕೋಟಿ ಪೈಕಿ 99.9% ಆಧಾರ್ ಲಿಂಕ್ ಆಗಿದ್ದು ಬ್ಯಾಂಕ್ ಅಕೌಂಟ್ ಲಿಂಕ್ ಕೂಡ ಆಗಿದೆ. ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‍ಗಳು ಆಧಾರ್ ಲಿಂಕ್ ಆಗಬೇಕಿದೆ. ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 5 ಕೆಜಿಗೆ 170 ರೂಪಾಯಿ ಅಕೌಂಟ್‍ಗೆ ಬೀಳಲಿದೆ.
Advertisement
ಹಣ ಭಾಗ್ಯ ಹೇಗೆ?
ನೀವು ಬಿಪಿಎಲ್ ಪಡಿತರ ಕಾರ್ಡ್‍ದಾರರಾಗಿರಬೇಕು. ರೇಷನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಆಧಾರ್ – ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ದುಡ್ಡು ಬರುವುದಿಲ್ಲ. ಕಾರ್ಡ್‌ನಲ್ಲಿ ಯಜಮಾನರಾಗಿರುವವರ ಖಾತೆಗೆ ಡಿಬಿಟಿ ಮೂಲಕ ಹಣ. ಅನ್ನಭಾಗ್ಯದ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆ ಅಗತ್ಯವಿಲ್ಲ.
Web Stories