ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ (Delhi Polls) ಇನ್ನೂ ನಾಲ್ಕು ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಶಾಕ್ ಆಗಿದೆ. ಒಂದು ದಿನದ ಹಿಂದೆಯಷ್ಟೇ ಎಎಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 8 ಮಂದಿ ನಿರ್ಗಮಿತ ಶಾಸಕರು ಶನಿವಾರ (ಇಂದು) ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ.
Advertisement
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗದಿದ್ದಕ್ಕೆ ಕೋಪಗೊಂಡು ರಾಜೀನಾಮೆ ನೀಡಿದ್ದ ವಂದನಾ ಗೌರ್ (ಪಾಲಂ ಕ್ಷೇತ್ರದ ಶಾಸಕ), ರೋಹಿತ್ ಮೆಹ್ರಾಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್ (ಕಸ್ತೂರ್ಬಾ ನಗರ), ರಾಜೇಶ್ ರಿಷಿ (ಉತ್ತಮ ನಗರ), ಬಿ ಎಸ್ ಜೂನ್ (ಬಿಜ್ವಾಸನ್), ನರೇಶ್ ಯಾದವ್ (ಮೆಹ್ರಾಲಿ) ಮತ್ತು ಪವನ್ ಶರ್ಮಾ (ಆದರ್ಶ ನಗರ) ಬಿಜೆಪಿ ಸೇರ್ಪಡೆಯಾಗಿದ್ದಾರೆ.
Advertisement
ಎಎಪಿಗೆ ರಾಜೀನಾಮೆ ನೀಡಿದ ನಂತರ, ಸದನದ ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಶುಕ್ರವಾರ ಪತ್ರಗಳನ್ನು ಕಳುಹಿಸಲಾಗಿತ್ತು. ಇದನ್ನೂ ಓದಿ: Union Budget: ಬಜೆಟ್ ಮಂಡಿಸಿ ಇತಿಹಾಸ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್
Advertisement
Advertisement
ಎಎಪಿ ಮಾಜಿ ಶಾಸಕ ವಿಜೇಂದರ್ ಗಾರ್ಗ್ ಮತ್ತು ನಿರ್ಗಮಿತ ಎಎಪಿ ನಾಯಜರು ದೆಹಲಿ ಬಿಜೆಪಿಯ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ