ಲಂಡನ್: ಭೂಗತ ಪಾತಕಿ, 1993ರ ಮುಂಬೈ ಸರಣಿ ಬಾಂಬ್ ದಾಳಿ ಮಾಡಿದ್ದ ದಾವೂದ್ ಇಬ್ರಾಹಿಂ ಆರ್ಥಿಕ ವ್ಯವಸ್ಥಾಪಕನನ್ನು ಲಂಡನ್‍ನ ಹಿಲ್ಟನ್ ಹೋಟೆಲ್‍ನಲ್ಲಿ ಶುಕ್ರವಾರ ಬಂಧಿಸಲಾಗಿದೆ.
ಜಬಿರ್ ಮೋತಿ ಬಂಧಿತ ಆರೋಪಿ. ಜಬಿರ್ ದಾವೂದ್ ಇಬ್ರಾಹಿಂ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದು, ದಾವೂದ್ ಕುಟುಂಬ ಹಾಗೂ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ಎಂದು ವರದಿಯಾಗಿದೆ.
Advertisement
ಇಂಗ್ಲೆಂಡ್, ಯುನೈಟೆಡ್ ಅರಬ್ ಎಮಿರೈಟರ್ಸ್ (ಯುಎಇ), ಆಫ್ರಿಕಾ, ಯುರೋಪ್, ಆಗ್ನೇಯ ಏಷ್ಯಾ ಹಾಗೂ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ದಾವೂದ್ ಇಬ್ರಾಹಿಂ ವ್ಯವಹಾರಗಳನ್ನು ಮೋತಿ ನೋಡಿಕೊಳ್ಳುತ್ತಿದ್ದನು ಎಂದು ವರದಿಯಾಗಿದೆ.
Advertisement
#FLASH: Key Dawood Ibrahim aide Jabir Moti detained by UK security agencies in London. Moti is a Pakistani National and is believed to be in charge of D-Company finances. pic.twitter.com/B0dXZUZ6Jw
— ANI (@ANI) August 19, 2018
Advertisement
ಈ ಹಿಂದೆಯೇ ಮೋತಿ ಬಂಧನಕ್ಕಾಗಿ ಭಾರತವು ಮನವಿ ಮಾಡಿಕೊಂಡಿತ್ತು. ಮೋತಿ ಸ್ಮಗಲಿಂಗ್, ಸುಲಿಗೆ ಸೇರಿದಂತೆ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಪಾಕಿಸ್ತಾನ, ಮಧ್ಯಪ್ರಾಚ್ಯ ದೇಶಗಳಲ್ಲಿ ಇರುತ್ತಿದ್ದ, ಕೆಲವು ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ನಲ್ಲಿ ಉಳಿದುಕೊಳ್ಳಲು 10 ವರ್ಷಗಳ ವಿಸಾ ಪಡೆದುಕೊಂಡಿದ್ದನು. ಇದರ ಜೊತೆ ಆತನು ಬಾರ್ಬಡೋಸ್ ಮತ್ತು ಆಂಟಿಗುವಾ ದೇಶಗಳ ನಾಗರೀಕತ್ವ ಪಡೆಯಲು ಮುಂದಾಗಿದ್ದನಂತೆ.
Advertisement
ಕರಾಚಿಯ ದಾವೂದ್ ಹಾಗೂ ಆತನ ಕುಟುಂಬ ನಡೆಸುತ್ತಿದ್ದ ‘ಡಿ ಕಂಪೆನಿ’ಯಲ್ಲಿ ಮೋತಿ ಕೂಡ ಸೇರುದಾರ ಎನ್ನಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv