ಮುಂಬೈ: ಇಂಗ್ಲೆಂಡ್‍ನಲ್ಲಿರುವ ಆಸ್ತಿ-ಪಾಸ್ತಿ ಜಪ್ತಿ ಬೆನ್ನಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಮತ್ತೊಂದು ಶಾಕ್ ಸಿಕ್ಕಿದೆ. ಸುಲಿಗೆ ಪ್ರಕರಣದಲ್ಲಿ ದಾವೂದ್ ತಮ್ಮ ಇಕ್ಬಲ್ ಕಸ್ಕರ್‍ನನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ನಾಗ್‍ಪಾಡಾದಲ್ಲಿರುವ ಮನೆಯಿಂದ ಎನ್‍ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನೇತೃತ್ವದ ತಂಡ ಕಸ್ಕರ್ ನನ್ನು ಬಂಧಿಸಿದೆ. ಮುಂಬೈನಲ್ಲಿ ನಾಲ್ಕು ಫ್ಲ್ಯಾಟ್ ನೀಡಿದ್ರೂ ಮತ್ತಷ್ಟು ಫ್ಲ್ಯಾಟ್ ನೀಡುವಂತೆ ಬೆದರಿಕೆ ಹಾಕಿದ್ದ ಅಂತ ಬಿಲ್ಡರೊಬ್ಬರು ನೀಡಿದ್ದ ದೂರಿನ ಮೇಲೆ ಕಸ್ಕರ್‍ನನ್ನು ಜೈಲಿಗಟ್ಟಲಾಗಿದೆ.
Advertisement
2003ರಲ್ಲಿ ಕಸ್ಕರ್‍ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಪಾಕಿಸ್ತಾನದ ಕರಾಚಿಯಲ್ಲಿ ಅಡಗಿಕೊಂಡಿರುವ ದಾವೂದ್‍ನನ್ನು ಭಾರತಕ್ಕೆ ಕರೆತರುವಲ್ಲಿ ಆತನ ತಮ್ಮನ ಬಂಧನ ಮಹತ್ವದ ಹೆಜ್ಜೆ ಎಂದೇ ಭಾವಿಸಲಾಗಿದೆ.
Advertisement
ದಾವೂದ್ ಬಗ್ಗೆ ಈಗ ಮಾತಾಡೋದು ಬೇಡ. ಆ ವಿಷ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಆತನನ್ನು ಸುಮ್ಮನೆ ಬಿಡಲಾಗದು ಎಂದು ಇತ್ತೀಚೆಗಷ್ಟೇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದರು.