ಸ್ಯಾಂಡಲ್ ವುಡ್ ಅಂಗಳದಿಂದ ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ಧ್ರುವ ಹೊಸ ರೂಪದ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ಈ ಸಿನಿಮಾದಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ನೈಜ ಘಟನೆ ಮತ್ತು ವ್ಯಕ್ತಿಗಳನ್ನು ಆಧರಿಸಿದ ಸಿನಿಮಾವಾಗಿದೆ ಎನ್ನುವುದು ವಿಶೇಷ. ಇದನ್ನೂ ಓದಿ : ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು
Advertisement
ಎಪ್ಪತ್ತರ ದಶಕದ ಕಥೆ
Advertisement
ಮದ್ರಾಸ್ ಪ್ರಾಂತ್ಯದ 70ರ ದಶಕದಲ್ಲಿ ನಡೆದ ಘಟನೆಯನ್ನು ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ದಶಕವನ್ನು ಕಟ್ಟಿಕೊಡುವುದಕ್ಕಾಗಿ ಈಗಾಗಲೇ ಸೆಟ್‍ಗಳು ಕೂಡ ನಿರ್ಮಾಣವಾಗುತ್ತಿವೆಯಂತೆ. ಸೀಗೆಹಳ್ಳಿ ಸಮೀಪದಲ್ಲಿ ಈ ಬೃಹತ್ ಸೆಟ್ ಗಳು ಈಗಾಗಲೇ ಸಿದ್ಧವಾಗುತ್ತಿವೆ. ಬಹುತೇಕ ಚಿತ್ರೀಕರಣ ಈ ಅದ್ಧೂರಿ ಸೆಟ್ ನಲ್ಲಿಯೇ ನಡೆಯಲಿದೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್
Advertisement
Advertisement
ಹಾಗಾದರೆ ನಿರ್ದೇಶಕರು ಯಾರು?
70ರ ದಶಕದ ಕಥೆಯನ್ನು ಕೈಗೆತ್ತಿಕೊಂಡಿರುವ ನಿರ್ದೇಶಕರು ಬೇರೆ ಯಾರೂ ಅಲ್ಲ, ಜೋಗಿ ಪ್ರೇಮ್. ಲಾಂಗ್ ಮಚ್ಚುಗಳ ಚಿತ್ರಗಳಿಗೆ ಫೇಮಸ್ ಆಗಿರುವ ಪ್ರೇಮ್, ಈ ಬಾರಿಯೂ ಭೂಗತ ಜಗತ್ತಿನ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರಿಗೆ ಎದುರಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಈ ಹೊಸ ಸಿನಿಮಾದ ಮುಹೂರ್ತ ಕೂಡ ನಡೆಯಲಿದೆಯಂತೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ಗೊಂದಲ ಗೂಡಾಗಿರುವ ಪ್ರಾಜೆಕ್ಟ್
ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಕೆಲ ವರ್ಷಗಳಿಂದ ಸುದ್ದಿ ಹರಿದಾಡುತ್ತಿತ್ತು. ಈ ಸಿನಿಮಾವನ್ನು ಉಮಾಪತಿ ನಿರ್ಮಾಣ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಇದೀಗ ಆ ಕಥೆಯನ್ನೇ ಧ್ರುವಗಾಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಉಮಾಪತಿ ಅವರ ಬದಲು ಬೇರೆ ನಿರ್ಮಾಣ ಸಂಸ್ಥೆಯು ಈ ಸಿನಿಮಾವನ್ನು ಮಾಡಲಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಸ್ಪಷ್ಟ ಮಾಹಿತಿ ಸಿಗಬೇಕಿದೆ.