ದಾವೋಸ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗೋದು ಅಪರೂಪ ಅನ್ನೋರೇ ಹೆಚ್ಚು. ನಗುವ ಒಂದು ಫೋಟೋ ತೆಗಿಬೇಕು ಅಂದ್ರೆ ಕಷ್ಟಕಷ್ಟ ಅಂತಿದ್ದ ಕಾಲವಿತ್ತು. ಆದ್ರೀಗ ಸಿಎಂ ಯಡಿಯೂರಪ್ಪ ಕೊಂಚ ಬದಲಾಗಿದ್ದಾರೆ ಅಂತಿದ್ದಾರೆ ಅವರ ಆಪ್ತರು. ಈ ನಡುವೆ ದಾವೋಸ್‍ನಲ್ಲಂತೂ ಯಡಿಯೂರಪ್ಪ ಅವರಿಗೆ ಸಿಟ್ಟು ಬಂದಿದ್ದೇ ಕಡಿಮೆ ಅಂತೆ. ಉದ್ಯಮಿಗಳ ಹಾಗೂ ರಾಜ್ಯದ ಅಧಿಕಾರಿಗಳ ಜೊತೆಗೆ ಫುಲ್ ಖುಷಿಯಾಗಿದ್ದಾರಂತೆ. ಜತೆಗೆ ಆಗಾಗ್ಗೆ ಫೋಟೋ ಶೂಟ್ ಕೂಡ ನಡೀತಾ ಇದೆ ಎನ್ನುವುದು ಫಾರಿನ್ ಸ್ಪೆಷಲ್.
ಸಿಎಂ ಯಡಿಯೂರಪ್ಪ ಅವರು ದಾವೋಸ್‍ಗೆ ತೆರಳಿದ ಮೊದಲ ದಿನವೇ ಸಿಂಗಲ್ ಆಗಿ ವಾಕ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಕೂಲಿಂಗ್ ಕನ್ನಡಕ, ಟೋಪಿ, ಫುಲ್ ಗೌನ್ ಹಾಕೊಂಡು ವಾಕ್ ಮಾಡಿದ್ದ ಫೋಟೋ ಫುಲ್ ವೈರಲ್ ಆಗಿತ್ತು. ಸಿಎಂ ದಾವೋಸ್‍ನಿಂದ ಶುಕ್ರವಾರ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಇವತ್ತು ಸಂಜೆ ಆರ್ಥಿಕ ಸಮ್ಮೇಳನದ ಎಲ್ಲ ಸಭೆಗಳನ್ನು ಮುಗಿಸಿ ಯಡಿಯೂರಪ್ಪ ಅವರು ದಾವೋಸ್ ಸಿರಿಯನ್ನು ಮನಸೊರೆಗೊಂಡರು ಎನ್ನಲಾಗಿದೆ. ದಾವೋಸ್ ಸುತ್ತಮುತ್ತ ರೌಂಡ್ ಹಾಕಿದ ಅವರು ನಗು ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
Advertisement
Advertisement
ಕರ್ನಾಟಕದಲ್ಲಿದ್ದಾಗ ಸಿಎಂ ಯಡಿಯೂರಪ್ಪ ಅವರು ಯಾವ ವಿಚಾರಕ್ಕೆ ಖುಷಿಯಾಗಿ ಇರ್ತಾರೆ, ಯಾವ ವಿಚಾರಕ್ಕೆ ಗರಂ ಆಗ್ತಾರೆ ಅಂತ ತಲೆಕೆಡಿಸಿಕೊಳ್ಳುತ್ತಿದ್ದ ಅಧಿಕಾರಿಗಳು, ಆಪ್ತರು ಈಗ ಕೂಲ್ ಆಗಿದ್ದಾರಂತೆ. ದಾವೋಸ್‍ನಲ್ಲಿ ಆ ಟೆನ್ಶನ್ ಇಲ್ಲ. ಬಹುತೇಕ ಎಲ್ಲ ಉದ್ಯಮಿಗಳ ಜತೆ ನಗುನಗುತ್ತಲೇ ಮಾತನಾಡುತ್ತಾರೆ. ನಮ್ಮ ಜತೆಯಲ್ಲೂ ಖುಷಿ ಖುಷಿಯಿಂದ ಮಾತಣಾಡುತ್ತಾರೆ. ನಮ್ಮ ರಾಜಾಹುಲಿ ಫುಲ್ ಖುಷ್ ಖುಷ್. ಮುಖದಲ್ಲಿ ಸದಾ ಸ್ಮೈಲ್ ಸ್ಮೈಲ್ ಎನ್ನುತ್ತಿದೆ ದಾವೋಸ್‍ನಲ್ಲಿ ಅವರ ಜತೆ ಇರುವ ಆಪ್ತ ಬಳಗ.