
ಮುಂಬೈ: ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಡೆಲ್ಲಿ ತಂಡದ ಎಡಗೈ ಬ್ಯಾಟ್ಸ್‌ಮ್ಯಾನ್ ಡೇವಿಡ್ ವಾರ್ನರ್ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.
ವಾರ್ನರ್ ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ 3 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 92 ರನ್ ಗಳಿಸಿದರು. ಈ ಮೂಲಕ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಗಳಿಸಿದ್ದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಉಡೀಸ್ ಮಾಡಿ ನಂ.1 ಪಟ್ಟವನ್ನು ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೆಲ್ (88) ಅರ್ಧಶತಕಗಳನ್ನು ಗಳಿಸಿದ್ದು, 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ (77), ಆ್ಯರನ್ ಫಿಂಚ್ (70), ರೋಹಿತ್ ಶರ್ಮಾ (69), ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ವೇಗಿಗಳ ಮಿಂಚಿನ ಎಸೆತಗಳ ದಾಖಲೆ
𝐌𝐎𝐒𝐓 𝟓𝟎𝐬 𝐈𝐍 𝐓𝟐𝟎 𝐇𝐈𝐒𝐓𝐎𝐑𝐘 🤯
A 𝐁𝐮𝐥𝐥 𝐑𝐮𝐧 that began in 2007 is still reaching new heights today 🔥🤩#YehHaiNayiDilli | #IPL2022 | #DCvSRH | @davidwarner31#TATAIPL | #IPL | #DelhiCapitals pic.twitter.com/v207Tl6oNi
— Delhi Capitals (@DelhiCapitals) May 5, 2022
ಟೂರ್ನಿಯಲ್ಲಿ ತಮ್ಮ ಹಳೆಯ ತಂಡವಾದ ಹೈದರಾಬಾದ್ ವಿರುದ್ಧ ಆಕರ್ಷಕ ಅರ್ಧಶತಕವನ್ನು ಗಳಿಸಿದ್ದಾರೆ. ಈ ಮೂಲಕ ಐಪಿಎಲ್‍ನಲ್ಲಿಯೂ ಸಹ ದಾಖಲೆಯ (54) ಅರ್ಧಶತಕಗಳನ್ನು ಗಳಿಸಿದ್ದಾರೆ. 15ನೇ ಆವೃತ್ತಿ ಐಪಿಎಲ್‍ನಲ್ಲಿ ವಾರ್ನರ್ ಅವರ 4ನೇ ಅರ್ಧಶತಕವಾಗಿದೆ. ಇದನ್ನೂ ಓದಿ: ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್
ಡೆಲ್ಲಿ ಪರ ಬ್ಯಾಟಿಂಗ್‍ನಲ್ಲಿ ಡೇವಿಡ್ ವಾರ್ನರ್ ಮತ್ತು ಪೊವೆಲ್ ಪರಾಕ್ರಮದ ಮುಂದೆ ಧೂಳಿಪಟವಾದ ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿ ಒಂದು ಕಡೆಯಾದರೆ, ಇನ್ನೊಂದೆಡೆ ಬ್ಯಾಟ್ಸ್ ಮ್ಯಾನಗಳ ವೈಫಲ್ಯದಿಂದಾಗಿ ಡೆಲ್ಲಿ ವಿರುದ್ಧ ಹೈದರಾಬಾದ್ 21 ರನ್‍ಗಳ ಅಂತರದಿಂದ ಸೋಲಿಗೆ ಶರಣಾಯಿತು.