ಸಿಡ್ನಿ: ಕೊರೊನಾ ವೈರಸ್ ವಿಶ್ವದ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದೆ. ಕೊರೊನಾ ನಿಯಂತ್ರಣಕ್ಕೆ ಹಲವು ದೇಶಗಳು ಲಾಕ್‍ಡೌನ್ ವಿಸ್ತರಣೆ ಮಾಡಿವೆ. ಪರಿಣಾಮ ಕ್ರಿಕೆಟ್ ಆಟಗಾರರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಆಸೀಸ್ ಆಟಗಾರ ಡೇವಿಡ್ ವಾರ್ನರ್ ತಮ್ಮ ಪುತ್ರಿಯೊಂದಿಗೆ ಬಾಲಿವುಡ್ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.
ಟಿಕ್‍ಟಾಕ್ ಪ್ರವೇಶ ಮಾಡಿರುವ ವಾರ್ನರ್ ಕಳೆದ ಕೆಲ ದಿನಗಳ ಹಿಂದೆ ಪುತ್ರಿಯ ಆಸೆಯಂತೆ ಟಿಕ್‍ಟಾಕ್‍ಗೆ ಎಂಟ್ರಿ ಕೊಡುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ತಮಗೆ ಟಿಕ್‍ಟಾಕ್ ಮಾಡಲು ಬರುವುದಿಲ್ಲ. ಇದರಲ್ಲಿ ನನಗೆ ಫಾಲೋವರ್ಸ್ ಕೂಡ ಇಲ್ಲ ಎಂದು ಹೇಳಿ ಸಹಾಯ ಮಾಡುವಂತೆ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದರು.
ಸದ್ಯ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿರುವ ವಾರ್ನರ್, ಬಾಲಿವುಡ್‍ನ ‘ಶೀಲಾ ಕಿ ಜವಾನಿ’ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಒತ್ತಾಯದ ಮೇರೆಗೆ ಮತ್ತೊಮ್ಮೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ವಾರ್ನರ್ ಪುತ್ರಿ ಭಾರತೀಯ ಶೈಲಿಯ ಉಡುಗೆಯನ್ನು ಧರಿಸಿದ್ದಾರೆ. ಸದ್ಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಐಪಿಎಲ್ 2020ರ ಟೂರ್ನಿಯಲ್ಲಿ ಹೈದರಾಬಾದ್ ತಂಡದ ನಾಯಕರಾಗಿ ವಾರ್ನರ್ ಆಯ್ಕೆಯಾಗಿದ್ದರು. ಈ ಹಿಂದೆಯೂ ಹೈದರಾಬಾದ್ ತಂಡದ ನಾಯಕರಾಗಿದ್ದ ವಾರ್ನರ್ ನಿಷೇಧ ಕಾರಣದಿಂದ ಕ್ರಿಕೆಟ್‍ನಿಂದ ದೂರವಾಗಿದ್ದರು. ಮಾರ್ಚ್ 29ರಂದು ಆರಂಭವಾಬೇಕಿದ್ದ ಐಪಿಎಲ್ ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಸದ್ಯ ದೇಶದಲ್ಲಿ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಟೂರ್ನಿ ಮೇಲೆ ಅನಿಶ್ಚಿತತೆ ಮುಂದುವರಿದಿದೆ.
View this post on Instagram
Indi has asked to also do one for you guys! ???????? please help me someone!!!!!! #statue