ನವದೆಹಲಿ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಬ್ಯಾಟರ್ ಡೇವಿಡ್ ವಾರ್ನರ್‌ಗೆ (David Warner) ಭಾರತ, ಇಲ್ಲಿನ ಜನ, ಸಂಸ್ಕೃತಿ ಎಂದರೆ ಅಚ್ಚುಮೆಚ್ಚು. ಆದ್ದರಿಂದ ಭಾರತಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ವಾರ್ನರ್ ಕೂಡ ಸಂಭ್ರಮಿಸುತ್ತಾರೆ. ತೆಲುಗಿನ ಹಿಟ್ ಸಿನಿಮಾ ‘ಪುಷ್ಪ’ದ ಹೀರೋ ಸ್ಟೈಲ್‌ನ್ನು ಅನುಕರಿಸಿ ಭಾರತೀಯರ ಗಮನ ಸೆಳೆದಿದ್ದರು. ಅಂತೆಯೇ ಈಗ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆಯಲ್ಲಿ ವಿಶೇಷ ಪೋಸ್ಟ್ ಹಾಕುವ ಮೂಲಕ ಭಾರತೀಯರಿಗೆ ವಿಶ್ ಮಾಡಿದ್ದಾರೆ.
ವಾರ್ನರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಭಾರತದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಜೈ ಶ್ರೀ ರಾಮ್ ಇಂಡಿಯಾ’ ಎಂದು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಭಗವಾನ್ ರಾಮನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್, ಪ್ರಾಣ ಪ್ರತಿಷ್ಠಾಪನೆ (Ram Mandir Pran Pratishtha Ceremony) ಆಚರಿಸಲು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ವಿಶ್ವದೆಲ್ಲೆಡೆ ರಾಮ ನಾಮ ಸ್ಮರಣೆ – ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ ರಾಮೋತ್ಸವ
Advertisement
View this post on Instagram
Advertisement
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಮಹೇಶ್ ಕುಮಾರ್ (ಜೋಹಾನ್ಸ್‌ಬರ್ಗ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್) ಮತ್ತು ದಕ್ಷಿಣ ಆಫ್ರಿಕಾದ ಇಡೀ ಭಾರತೀಯ ಸಮುದಾಯಕ್ಕೆ ಶುಭ ಹಾರೈಸುತ್ತೇನೆ. ಇದು ಎಲ್ಲರಿಗೂ ಶಾಂತಿ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ತರಲಿ ಕೇಶವ್ ಮಹಾರಾಜ್ ಪೋಸ್ಟ್ ಹಾಕಿದ್ದಾರೆ.
Advertisement
Advertisement
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ಯಾಟರ್ ಡೇವಿಡ್ ವಾರ್ನರ್, ಏಕದಿನ ಕ್ರಿಕೆಟ್‌ನಿಂದಲೂ ದೂರ ಸರಿಯುವುದಾಗಿ ಈಚೆಗೆ ಘೋಷಿಸಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ