ಸಿಡ್ನಿ: ಆಸೀಸ್ ಆಟಗಾರ ಡೇವಿಡ್ ವಾರ್ನರ್ (David Warner) ಅವರು ಏಕದಿನ ಕ್ರಿಕೆಟ್‌ಗೆ ವಿದಾಯ (ODI retirement) ಘೋಷಿಸಿದ್ದಾರೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ವಾರ್ನರ್ ಶಾಕ್ ನೀಡಿದ್ದಾರೆ.
ಜನವರಿ 3 ರಂದು ಸಿಡ್ನಿಯಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯವು ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯವಾಗಲಿದೆ ಎಂದು ವಾರ್ನರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್ ಮಾಜಿ ಕ್ರಿಕೆಟಿಗ ಬಣ್ಣನೆ
Advertisement
Advertisement
ನಾನು ಏಕದಿನ ಪಂದ್ಯದಿಂದ ನಿವೃತ್ತಿ ಹೊಂದುತ್ತೇನೆ. ವಿಶ್ವಕಪ್‌ನಲ್ಲಿ ನಾವು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದೇವೆ. ಭಾರತದಲ್ಲಿ ಅದನ್ನು ಗೆದ್ದುಕೊಂಡಿದ್ದೇನೆ. ಇದುವೇ ನನ್ನ ದೊಡ್ಡ ಸಾಧನೆ. ಇಂದು ನಾನು ನಿವೃತ್ತಿಯಾಗಲು ನಿರ್ಧರಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
Advertisement
ವಿಶ್ವಕಪ್‌ನಲ್ಲಿ (World Cup 2023) ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಾರ್ನರ್ ಆರನೇ ಸ್ಥಾನದಲ್ಲಿದ್ದಾರೆ.
Advertisement
2009ರಲ್ಲಿ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ವೃತ್ತಿಜೀವನದಲ್ಲಿ 161 ಪಂದ್ಯಗಳನ್ನು ಆಡಿರುವ ವಾರ್ನರ್, 33 ಅರ್ಧಶತಕ ಮತ್ತು 22 ಶತಕಗಳನ್ನು ಬಾರಿಸುವುದರ ಮೂಲಕ ಒಟ್ಟು 6932 ರನ್ ಗಳಿಸಿದ್ದಾರೆ.