ಸಿಡ್ನಿ: ಟಾಲಿವುಡ್ ನಟ ಅಲ್ಲು ಅರ್ಜನ್ ನಟನೆಯ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿತ್ತು. ಎಲ್ಲಾ ಭಾಷೆಯ ಅಭಿಮಾನಿಗಳನ್ನು ಸಳೆಯುವಲ್ಲಿ ಈ ಸಿನಿಮಾ ಸಾಕಷ್ಟು ಹೆಸರನ್ನು ಮಾಡಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರು ತಮ್ಮ ಮಗಳ ಜೊತೆಗೆ ಈ ಸಿನಿಮಾದ ಡೈಲ್ ಹೇಳಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡೇವಿಡ್ ವಾರ್ನರ್ ತಮ್ಮ ಮಗಳ ಜೊತೆಗೆ ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್ ಎಂದು ಮಾಸ್ ಡೈಲಾಗ್ ಹೇಳಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಶೈಲಿಯಲ್ಲಿ ಗಡ್ಡ ಸವರಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿಸಿರುವ ಈ ವೀಡಿಯೋಗೆ ಅಲ್ಲು ಅರ್ಜುನ್ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
View this post on Instagram
ಪುಷ್ಪ ಸಿನಿಮಾದ ಮಾಸ್ ಡೈಲಾಗ್‍ನ್ನು ಡೇವಿಡ್ ವಾರ್ನರ್ ತಮ್ಮ ಮಗಳ ಜೊತೆಗೆ ಹೇಳಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಮಜವಾದ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಪುಷ್ಪ ಅಂದ್ರೆ ಫ್ಲವರ್ ಅಂತ ತಿಳ್ಕೊಂಡಿದೀರಾ? ಎಂದು ಬರೆದಿರುವ ವಾರ್ನರ್, ಉಳಿದದ್ದನ್ನು ದಯವಿಟ್ಟು ಪೂರ್ತಿ ಮಾಡಿ. ಈ ಡೈಲಾಗ್ ನನ್ನ ಜೊತೆ ಹೇಳಲು ಇಡೀ ಭಾರತವೇ ಕಾಯುತ್ತಿದೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಕೆಲವು ದಿನಗಳ ಹಿಂದೆ ವಾರ್ನರ್, ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ತಂತ್ರಜ್ಞಾನದ ಮೂಲಕ ತಮ್ಮ ಮುಖವನ್ನು ಅಂಟಿಸಿ, ವೀಡಿಯೋ ಹಂಚಿಕೊಂಡಿದ್ದರು. ಇದು ವೈರಲ್ ಆಗಿತ್ತು. ಇದೇ ಸಿನಿಮಾದ ಮಾಸ್ ಡೈಲಾಗ್‍ನ್ನು ಮಗಳ ಜೊತೆಗೆ ಹೇಳುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.