ಗುವಾಹಟಿ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಭಾನುವಾರ ನಡೆದ T20 ಪಂದ್ಯದಲ್ಲಿ 16 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ (Team India) 2-0 ಅಂತರದಿಂದ ಸರಣಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ (Devid Miller) T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (Cricket) ವಿಶ್ವದಾಖಲೆ ನಿರ್ಮಿಸಿದ್ದಾರೆ.
Advertisement
ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 47 ಎಸೆತಗಳಲ್ಲಿ 106 ರನ್‌ಗಳನ್ನು (7 ಸಿಕ್ಸರ್, 8 ಬೌಂಡರಿ) ಸಿಡಿಸುವ ಮೂಲಕ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಬ್ಯಾಟರ್‌ಗಳಲ್ಲಿ ಅತಿಹೆಚ್ಚು ರನ್ ಸಿಡಿಸಿದ ದಾಖಲೆ ಮಾಡಿದ್ದಾರೆ. ಇದಕ್ಕೂ ಮುನ್ನ 2019ರ ಆಗಸ್ಟ್ 29ರಂದು ಟರ್ಕಿ ವಿರುದ್ಧ ನಡೆದ ಪಂದ್ಯದಲ್ಲಿ ರೊಮೇನಿಯಾದ ಶಿವಕುಮಾರ ಪೆರಿಯಾಳ್ವಾರ್ (Sivakumar Periyalwar) 40 ಎಸೆತಗಳಲ್ಲಿ ಅಜೇಯ 105 ರನ್ ಸಿಡಿಸಿದ್ದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಆಟದಲ್ಲಿ 16 ರನ್‌ಗಳ ಜಯ – ಸರಣಿ ಗೆದ್ದ ಟೀಂ ಇಂಡಿಯಾ
Advertisement
Advertisement
ಟಿ20 ನಲ್ಲಿ ಮಿಲ್ಲರ್ ಟಾಪ್:
ಡೇವಿಡ್ ಮಿಲ್ಲರ್ (Devid Miller) ಟಿ20 ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿದ್ದಾರೆ. ಡೇವಿಡ್ ಮಿಲ್ಲರ್ 2017ರ ಅಕ್ಟೋಬರ್ 10ರಂದು ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಸಿಡಿಸಿ ಯಾರೂ ಮುರಿಯದ ದಾಖಲೆ ಬರೆದಿದ್ದಾರೆ. ಈ ಬೆನ್ನಲ್ಲೇ ಟೀಂ ಇಂಡಿಯಾ (Team India) ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma) ಸಹ 2017 ಡಿಸೆಂಬರ್ 22ರಂದು ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 35 ಎಸೆತಗಳಲ್ಲಿ 100 ರನ್ (8 ಸಿಕ್ಸರ್, 11 ಬೌಂಡರಿ) ಸಿಡಿಸಿ, 43 ಎಸೆತಗಳಲ್ಲಿ 118 ರನ್ ಪೇರಿಸಿದ್ದರು. ನಂತರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಎಸ್.ವಿಕ್ರಮಶೇಖರ 35 ಎಸೆತಗಳಲ್ಲಿ, ಟೀಂ ಇಂಡಿಯಾದ ಶಿವಕುಮಾರ್ ಪೆರಿಯವಾರ್ ಹಾಗೂ ಝೀಶಾನ್ ಕುಕಿಖೇಲ್ 39 ಎಸೆತಗಳಲ್ಲಿ ಶತಕ ಬಾರಿಸಿ ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡರು. ಇದನ್ನೂ ಓದಿ: T20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೂರ್ಯ
Advertisement
ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಭಾರತ 238 ರನ್‌ಗಳ ಕಠಿಣ ಗುರಿ ನೀಡಿತ್ತು. ಆದರೆ ಭರ್ಜರಿ ಸಿಕ್ಸರ್, ಬೌಂಡರಿಗಳ ಹೊರತಾಗಿಯೂ 16 ರನ್‌ಗಳಿಂದ ದಕ್ಷಿಣ ಆಫ್ರಿಕಾ ಸೋತಿತು. ಈ ಪಂದ್ಯದಲ್ಲಿ ಒಟ್ಟು 40 ಬೌಂಡರಿ ಹಾಗೂ 28 ಸಿಕ್ಸ್ಗಳು ದಾಖಲಾದವು. ಭಾರತದ ಪರ 25 ಬೌಂಡರಿ 13 ಸಿಕ್ಸ್ ದಾಖಲಾದರೆ ದಕ್ಷಿಣ ಆಫ್ರಿಕಾದ ಪರ 15 ಬೌಂಡರಿ 12 ಸಿಕ್ಸ್ ದಾಖಲಾಯಿತು. ಕೊನೆ ಕ್ಷಣದ ವರೆಗೂ ಇತ್ತಂಡಗಳ ಆಟ ರೋಚಕತೆಯಿಂದ ಕೂಡಿತ್ತು.