ದಾವಣಗೆರೆ: ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನೂತನ ಎಸ್‍ಪಿ ಹನುಮಂತರಾಯ ಅವರು ರೌಡಿಗಳ ಪರೇಡ್ ನಡೆಸಿದರು.
ನಗರದ ಡಿಆರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ 300ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಕರೆ ತರಲಾಯಿತು. ಎಸ್‍ಪಿ ಹನುಮಂತರಾಯ ಅವರು ಪ್ರತಿಯೊಬ್ಬ ರೌಡಿಶೀಟರ್ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಲ್ಲದೆ ಎಸ್‍ಪಿ ಹನುಮಂತರಾಯ ರೌಡಿಶೀಟರ್‌ಗಳಿಗೆ ವಾರ್ನಿಂಗ್ ಕೂಡ ಮಾಡಿದರು. ಯಾವುದೇ ಪ್ರಕರಣದಲ್ಲಿ ಭಾಗಿಯಾದರೆ ಮುಂದಿನ ದಿನಗಳಲ್ಲಿ ಸನ್ನಡತೆಯ ಆಧಾರದ ಮೇಲೆ ರೌಡಿಶೀಟರ್ ತೆಗೆದು ಹಾಕಲಾಗುವುದು. ಇನ್ಮುಂದೆಯಾದರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಪಿ, ಜಿಲ್ಲೆಯಲ್ಲಿ 697 ರೌಡಿಶೀಟರ್ ಗಳಿದ್ದು, ಕೆಲವರು ಕೋರ್ಟ್ ಕೇಸ್‍ಗಳಿದೆ ಹಾಗಾಗಿ ಅವರು ಗೈರಾಗಿದ್ದಾರೆ. ಅವರನ್ನು ಮುಂದಿನ ದಿನಗಳಲ್ಲಿ ಪರೇಡ್ ನಡೆಸಲಾಗುವುದು, ಮತ್ತೊಂದು ಪ್ರಕರಣ ಏನಾದ್ರು ಭಾಗಿಯಾದ್ರೆ ರೌಡಿಶೀಟರ್‌ಗಳನ್ನು ಗಡಿ ಪಾರು ಮಾಡಲಾಗುತ್ತದೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.