ದಾವಣಗೆರೆ: ಈಶ್ವರಪ್ಪ, ಯಡಿಯೂರಪ್ಪ ಲವ ಕುಶ ಇದ್ದಂತೆ. ಈಶ್ವರಪ್ಪ ನವರು ಯಡಿಯೂರಪ್ಪ ನವರ ವಿರುದ್ಧ ಟೀಕೆ ಮಾಡಿಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಪಕ್ಷದಲ್ಲಿ ಏನೇ ಇದ್ದರು ಅದನ್ನು ಬಹಿರಂಗವಾಗಿ ಹೇಳಿಕೆ ನೀಡಬೇಡಿ. ಯಾವುದೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕುಳಿತು ಚರ್ಚೆ ಮಾಡೋಣಾ. ಬಹಿರಂಗ ಹೇಳಿಕೆ ಕೊಟ್ಟರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಭಿನ್ನಮತ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.
Advertisement
ಇಂದು ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿ, ವಾಪಸ್ಸು ಬಂದಿದ್ದು ಆಯ್ತು. ಪಕ್ಷ ಸಂಘಟನೆಯಲ್ಲಿದೆ, ಯಡಿಯೂರಪ್ಪನವರೇ ನಮ್ಮ ನಾಯಕರು. ನಾವೆಲ್ಲ ಯಡಿಯೂರಪ್ಪ ನವರ ಜೊತೆ ಇರುತ್ತೇವೆ. ಈ ಅರ್ಥದಲ್ಲಿ ಮಾತ್ರ ರಾಮದಾಸ್ ಹೇಳಿರೋದು, ಬೇರೆನು ಅಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಸಿಎಂ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್, ಯಡಿಯೂರಪ್ಪನವರು ಹೋರಾಟದ ಮುಖಾಂತರ ಪಕ್ಷ ಕಟ್ಟಿದ್ದಾರೆ. ಪ್ರಶ್ನಾತೀತ ವ್ಯಕ್ತಿಯಾಗಿ ಬೆಳೆದಿದ್ದಾರೆ. ಅವರ ಮೇಲೆ ಕಾಂಗ್ರೆಸ್‍ನವರು ಸುಖಾ ಸುಮ್ಮನೆ ಅಪಪ್ರಚಾರ ಮಾಡುತ್ತಾ ಇದ್ದಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಕಿಡಿಕಾರಿದರು.
Advertisement
ಬಿಎಸ್‍ವೈ ತಂತಿ ಮೇಲೆ ನಡಿಗೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಎಲ್ಲಾ ಸಮಾಜಕ್ಕೆ ಸಮಾನ ರೀತಿ ಅನುದಾನ ಬಿಡುಗಡೆ ಮಾಡಲು ಈ ರೀತಿ ಹೇಳಿದ್ದಾರೆ. ವೀರಶೈವ ಮಠಗಳಿಗೆ ಅನುದಾನ ನೀಡಿ ಎಂದು ಹೇಳಿದಾಗ ಈ ರೀತಿ ಹೇಳಿಕೆ ನೀಡಿದ್ದಾರೆ. ಪಕ್ಷದಲ್ಲಿ ಯಾವುದೇ ಇರಿಸು ಮುರಿಸಿಲ್ಲ. ರಾಜ್ಯದಲ್ಲಿ ನೆರೆಹಾವಳಿಯಾಗಿದ್ದು ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರದ ನಾಯಕರ ಮೇಲೆ ವಿಶ್ವಾಸವಿದೆ. ಅನುದಾನ ಬೇಗ ಬಿಡುಗಡೆ ಮಾಡುತ್ತಾರೆ. 2 ಸಾವಿರ ದಿಂದ 3 ಸಾವಿರ ಕೋಟಿ ಹಣ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನು ಓದಿ: ಸಂಘಟನೆ ಬಿಟ್ಟು ಹೋದವ್ರು ಯಾರೂ ಯಶಸ್ವಿಯಾಗಿಲ್ಲ- ಕೆ.ಎಸ್ ಈಶ್ವರಪ್ಪ
ಹೊಸಪೇಟೆಯಲ್ಲಿ ಹೊಸ ಜಿಲ್ಲೆಗೆ ಪಕ್ಷದ ಶಾಸಕರಿಂದಲೇ ವಿರೋಧ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಯಡಿಯೂರಪ್ಪನವರು ಸಚಿವ ಶ್ರೀರಾಮುಲು ಜೊತೆ ಮಾತನಾಡಿದ್ದಾರೆ. ಎಲ್ಲಾ ಶಾಸಕರು ಮತ್ತು ಸಂಸದರನ್ನು ಕರೆದು ಸಭೆ ನಡೆಸಲಾಗುತ್ತದೆ. ಬೆಳಗಾವಿ, ಬಳ್ಳಾರಿಯಲ್ಲಿ ಹೊಸ ಜಿಲ್ಲೆಗಳಾದರೆ ಒಳ್ಳೆಯದು. ಆಡಳಿತ ದೃಷ್ಟಿಯಿಂದ ಅಲ್ಲಿ ಹೆಚ್ಚು ಅನುದಾನ ನೀಡಿ ಅಭಿವೃದ್ಧಿ ಮಾಡಬಹುದು. ಅದಕ್ಕಾಗಿ ಹೊಸಪೇಟೆ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಲು ಹೊರಟಿದ್ದಾರೆ. ಇಲ್ಲಿ ಮುಖ್ಯಮಂತ್ರಿಗಳ ಸ್ವಾರ್ಥ ಇಲ್ಲ. ಶಾಸಕ ಕರುಣಾಕರ ರೆಡ್ಡಿಯವರಿಗೆ ಸಹ ನಮ್ಮವರು. ಅವರಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.