ದಾವಣಗೆರೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಪ್ರಯುಕ್ತ ದಾವಣಗೆರೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಸಹಯೋಗದಲ್ಲಿ ರಕ್ತದಾನ ಶಿಬಿರ, ರಕ್ತದ ಗುಂಪಿನ ತಪಾಸಣಾ ಶಿಬಿರ ಹಾಗೂ ಉಚಿತ ಔಷಧಿ ವಿತರಣಾ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಡಿಎಆರ್ ಗ್ರೌಂಡ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಕಾರ್ಯಕ್ರಮ ಉದ್ಘಾಟಿಸಿ, ರಕ್ತದಾನಿಗಳಿಗೆ ಹಣ್ಣು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕೇವಲ ಕಾನೂನು ಸುವ್ಯವಸ್ಥಿತ ಸಂಚಾರಿ ನಿಯಮಗಳ ಪಾಲನೆ ಬಿಟ್ಟು ಇಂದು ನೂರಾರು ರೋಗಿಗಳಿಗೆ ಜೀವ ಉಳಿಸುವಂತಹ ಕೆಲಸವನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಮಾಡಿದ್ದು, ಒಳ್ಳೆಯ ಬೆಳವಣೆಗೆ ಎಂದು ಅಭಿನಂದನೆ ಸಲ್ಲಿಸಿದರು.
Advertisement
Advertisement
ಅಲ್ಲದೆ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಜೊತೆಗೆ ಉಚಿತ ಔಷಧಿ ಗಳನ್ನು ವಿತರಿಸಲಾಯಿತು. 48 ಜನ ನಾಗರೀಕರು ಸೇರಿದಂತೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ರಕ್ತದಾನ ಮಾಡಿದರು.
Advertisement
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್ ಎಂ, ಡಿವೈಎಸ್ಪಿ ಪ್ರಕಾಶ್ ಬಿ.ವಿ., ಪೊಲೀಸ್ ನಿರೀಕ್ಷಕರಾದ ತಿಮ್ಮಣ್ಣ, ಗಜೇಂದ್ರಪ್ಪ ಕೆ.ಎನ್, ಸತೀಶ್ ಕುಮಾರ್ ಯು., ಅಗ್ನಿಶಾಮಕ ಅಧಿಕಾರಿಗಳಾದ ಪ್ರಭು ಶರ್ಮಾ, ಪಿಎಸೈಗಳಾದ ಮಂಜುನಾಥ್ ಲಿಂಗಾರೆಡ್ಡಿ, ಪುಷ್ಪಲತಾ, ಇಮ್ರಾನ್, ಶೈಲಜಾ, ರೂಪ ತೆಂಬದ್ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.