ದಾವಣಗೆರೆ: ಹೊಸ ವರ್ಷ ಆಚರಣೆಗೆ ಇನ್ನೇನೂ ಕೆಲವೇ ಗಂಟೆಗಳು ಬಾಕಿ ಇದ್ದು, ಹೋಟೆಲ್ ರೆಸ್ಟೋರೆಂಟ್, ವೈನ್‍ಗಳಿಗೆ ಮದ್ಯ ಮಾರಾಟ ಮಾಡಿ ಅಬಕಾರಿ ಇಲಾಖೆ ತನ್ನ ಗುರಿ ಮುಟ್ಟಲು ಮುಂದಾದರೆ, ಇತ್ತ ದಾವಣಗೆರೆಯೆ ಪೊಲೀಸರು ಅಂದು ದಂಡ ಹಾಕಲು ರೆಡಿಯಾಗಿದ್ದಾರೆ.
ಹೊಸ ವರ್ಷ ಆಚರಣೆ ಎಂದರೆ ಸಾಕು ಯುವಕರಿಂದ ಹಿಡಿದು ಮುದುಕರತನಕ ಪಾರ್ಟಿ ಜೋರಾಗಿದ್ದು, ಮದ್ಯದ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಮದ್ಯ ಕುಡಿದು ಬರುವವರಿಗೆ ಪೊಲೀಸ್ ಇಲಾಖೆ ದಂಡ ಹಾಕಲು ಸಜ್ಜಾಗಿದ್ದು, ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ, ಕುಡಿದು ವಾಹನ ಓಡಿಸಿಕೊಂಡು ಬರುವವರು, ಹೆಲ್ಮೆಟ್ ಹಾಕದೇ ಇರುವವರು, ತ್ರಿಬಲ್ ರೈಡಿಂಗ್‍ನಲ್ಲಿ ಗಾಡಿ ಓಡಿಸುವವರೆಗೆ ದೊಡ್ಡ ಮಟ್ಟದ ದಂಡ ಹಾಕಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ.
Advertisement
Advertisement
ಅದರಲ್ಲೂ ಕುಡಿದು ವಾಹನ ಓಡಿಸುವ ಸವಾರರಿಗೆ 10 ಸಾವಿರ ರೂ. ದಂಡ ಹಾಕಲಾಗುವುದು ಎಂದು ಪೊಲೀಸರು ಹೇಳುತ್ತಿದ್ದು, ನಿಜವಾಗಿಯೂ ದಂಡ ಹಾಕುತ್ತಾರೆಯೇ ಎಂದು ಕಾದು ನೋಡಬೇಕು. ಅಲ್ಲದೆ ಕುಡಿದು ವಾಹನ ಓಡಿಸುವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿದ್ದು, ಹೊಸ ವರ್ಷಾಚರಣೆ ದಿನ ಎಷ್ಟು ಡ್ರಂಕ್ & ಡ್ರೈವ್ ಕೇಸ್ ಬೀಳುತ್ತದೆ ಎಂಬುದು ಗೊತ್ತಾಗಬೇಕಾಗಿದೆ.
Advertisement
Advertisement
ಬಿಯರ್ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ವ್ಯಾಪಾರವಾಗುತ್ತಿದ್ದು, ಚಳಿಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಹಲವರು ಹಾಟ್ ಡ್ರಿಂಕ್ಸ್ ಗೆ ಕನ್ವರ್ಟ್ ಆಗಿದ್ದಾರೆ. ಬಿಯರ್ ದರವೂ ಹೆಚ್ಚಿದ್ದು, ಇದನ್ನು ಕೆಳ ವರ್ಗದವರು ಖರೀದಿಸುತ್ತಿಲ್ಲ. ಕೇವಲ ಯುವಕರು, ಬಿಯರ್‍ನಲ್ಲಿ ಆಲ್ಕೋಹಾಲ್ ಕಡಿಮೆ ಇರುವ ಕಾರಣ ಆಗಾಗ ಮದ್ಯ ಸೇವಿಸುವರು ಮಾತ್ರ ಬಿಯರ್ ಬಳಸುತ್ತಾರೆ ಎನ್ನಲಾಗಿದೆ.
ಈ ಹಿಂದೆ ಬಿಯರ್, ಐಎಂಎಲ್ ಮಾರಾಟದ ಪ್ರಮಾಣ ಸಹಜವಾಗಿಯೇ ಹೆಚ್ಚು ಮಾರಾಟವಾಗುತ್ತಿತ್ತು. ಹಿಂದೆ ಮದ್ಯದ ದರ ಕಡಿಮೆಯಿದ್ದ ಕಾರಣ ಹಲವರು ಚಿಪರ್ ಬದಲು ಬ್ರಾಂಡ್ ಮದ್ಯವನ್ನೇ ಕುಡಿಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮದ್ಯದ ದರ ಏರಿಕೆಯಾದ ಕಾರಣ ಬ್ರಾಂಡ್ ಕುಡಿಯುತ್ತಿದ್ದವರು, ವಾಪಸ್ ಚೀಪರ್ ಗೆ ಬಂದರು. ಹೊಸ ವರ್ಷದ ಸಂದರ್ಭದಲ್ಲಿ ಐಎಂಎಲ್ ಹೆಚ್ಚು ಸೇಲ್ ಆಗಿದ್ದು, ಬಿಯರ್ ಸೇಲ್ ಕಡಿಮೆಯಾಗಿದೆ.