ದಾವಣಗೆರೆ: ಕಳೆದ 20 ದಿನಗಳಿಂದ ನಿಗೂಢ ಜ್ವರದಿಂದ ಶೇ. 70ರಷ್ಟು ಮಂದಿ ಜ್ವರದಿಂದ ಬಳಲುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜನ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ. ಜ್ವರ, ಕಾಲುನೋವು, ಮೂಗಿನ ಹತ್ತಿರ ಕಪ್ಪು ಕಲೆ, ಕೈಕಾಲು ಬಾವು ಬರುವುದು, ಚರ್ಮದ ಪೊರೆ ಸುಲಿಯುವುದು, ಗುಳ್ಳೆಗಳು, ಸುಸ್ತು ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ.
Advertisement
Advertisement
ಸೊಳ್ಳೆ ಕಾಟ ಹಾಗೂ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರು ಸೇವನೆಯಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಾನನಕಟ್ಟೆ ಗ್ರಾಮಕ್ಕೆ ವೈದ್ಯರು ತೆರಳಿ ಜ್ವರದಿಂದ ಬಳಲುತ್ತಿರುವವರ ಪರೀಕ್ಷೆ ನಡೆಸಿದ್ದಾರೆ. ಇದನ್ನೂ ಓದಿ: ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನ್ಯೂ ರೂಲ್ಸ್
Advertisement
ನಿತ್ಯ ದಾವಣಗೆರೆ, ಜಗಳೂರು ಆಸ್ಪತ್ರೆಗೆ ಅಲೆದಾಡುತ್ತಿರುವ ಬಡವರ್ಗದ ಜನರು, ಕಳೆದ ಒಂದು ತಿಂಗಳುಗಳಿಂದ ಈ ನಿಗೂಢ ಜ್ವರ ಸಾಕಷ್ಟು ಜನರನ್ನು ಹೈರಾಣಾಗಿಸಿದೆ. ಇದರಿಂದ ಕಾನನಕಟ್ಟೆ ಗ್ರಾಮಸ್ಥರು ನಿತ್ಯ ಜಗಳೂರು, ದಾವಣಗೆರೆ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಮೈ, ಕೈ, ಕೀಲುನೋವು ಜೊತೆಗೆ ವಿಪರೀತ ಜ್ವರದಿಂದ ಬಳಲುತ್ತಿರುವ ಜನಕ್ಕೆ ಆರೋಗ್ಯ ಇಲಾಖೆ ಆಸರೆಯಾಗಬೇಕಾಗಿದೆ. ಇನ್ನೂ ಗ್ರಾಮದಲ್ಲಿ ವೈದ್ಯರ ಕ್ಯಾಂಪ್ ಹಾಕಿ ಸೂಕ್ತ ಚಿಕಿತ್ಸೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ಕೋಟ್ಯಧಿಪತಿ ಜೈಲುಪಾಲು