ದಾವಣಗೆರೆ: ನಗರದಲ್ಲಿ (Davangere) ಶಿವಾಜಿ, ಐ ಲವ್ ಮಹಮ್ಮದ್, ರಾಮನ ಫ್ಲೆಕ್ಸ್ ವಿವಾದದ ಬಳಿಕ ಮತ್ತೊಂದು ಫ್ಲೆಕ್ಸ್ ವಿವಾದ ಮುನ್ನೆಲೆಗೆ ಬಂದಿದೆ.
ಅಡ್ವಾಣಿ (L.K Advani) ನೇತೃತ್ವದ ರಾಮಜ್ಯೋತಿ ರಥಯಾತ್ರೆ (Ram Rath Yatra) ವೇಳೆ ನಗರದಲ್ಲಿ ನಡೆದಿದ್ದ ಫೈರಿಂಗ್‌ಗೆ 8 ಜನ ಬಲಿಯಾಗಿದ್ದರು. ಈ ಘಟನೆ ನಡೆದು ಇಂದಿಗೆ 35 ವರ್ಷಗಳು ಕಳೆದಿವೆ. ಈ ಹಿನ್ನಲೆ ವೆಂಕಟೇಶ್ವರ ವೃತ್ತದಲ್ಲಿ ಮೃತಪಟ್ಟವರ ಬ್ಯಾನರ್ ಹಾಕಿ ಹಿಂದೂ ಕಾರ್ಯಕರ್ತರು ಗೌರವ ನಮನ ಸಲ್ಲಿಸಿದ್ದರು. ಈ ವಿವಾದಾತ್ಮಕ ಫ್ಲೆಕ್ಸ್‌ನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಪೊಲೀಸರ ನಡೆಗೆ ಹಿಂದೂ ಕಾರ್ಯಕರ್ತರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ
ಶಾಂತಿಯಿಂದ ಗೌರವ ಅರ್ಪಣೆ ಮಾಡಿದ್ರೆ ಯಾಕೆ ವಿರೋಧ? ಐ ಲವ್ ಮಹಮ್ಮದ್ ಬ್ಯಾನರ್‌ಗೆ ಅವಕಾಶ ನೀಡ್ತಿರಿ. ಹಿಂದೂ ಹಬ್ಬಗಳಿಗೆ ತೊಂದರೆ ಕೊಡ್ತೀರಿ. ಮುಸ್ಲಿಮರ ಓಲೈಕೆಗಾಗಿ ಹಿಂದೂ ಹುತಾತ್ಮರ ಬ್ಯಾನರ್ ತೆಗೆಸಿದ್ದೀರಿ. ಶಿವಾಜಿ ಬ್ಯಾನರ್ ತೆಗೆಸಿದ್ರೆ, ಶ್ರೀ ರಾಮನ ಬ್ಯಾನರ್ ಕಿತ್ತಾಕಿದ್ದಾಗ ಸುಮ್ಮನಿದ್ರಿ. ಹಿಂದೂ ವಿರೋಧಿ ನಡೆ ನಿಲ್ಲದಿದ್ದರೆ ಸುನಾಮಿ ರೀತಿ ಬರ್ತಿವಿ ಎಂದು ಹಿಂದೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರಾಮಮಂದಿರ ನಿರ್ಮಾಣದ ವಿಚಾರವಾಗಿ ದಾವಣಗೆರೆಯಲ್ಲಿ 1990ರಲ್ಲಿ ಅಡ್ವಾಣಿ ನೇತೃತ್ವದ ರಾಮಜ್ಯೋತಿ ರಥಯಾತ್ರೆ ನಡೆದಿತ್ತು. ಈ ವೇಳೆ ಕೋಮು ಗಲಭೆ ನಡೆದಿತ್ತು. ಆಗ ಫೈರಿಂಗ್‌ಗೆ 8 ಹೋರಾಟಗಾರರು ಮೃತಪಟ್ಟಿದ್ದರು. ಇದನ್ನೂ ಓದಿ: ‘ಐ ಲವ್ ಮಹಮ್ಮದೀಯ’ ಎಂಬ ಫ್ಲೆಕ್ಸ್ ಹಾಕಿದ್ದಕ್ಕೆ ಗಲಾಟೆ – ಮನೆಗಳನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ