ದಾವಣಗೆರೆ: ರೈತ ದೇಶದ ಬೆನ್ನೆಲುಬಾದರೆ, ರೈತನ ಬೆನ್ನೆಲುಬು ಜಾನುವಾರಗಳು (Cattle). ಇವುಗಳನ್ನು ನಂಬಿ ರೈತ ಜೀವನ ನಡೆಸುತ್ತಾನೆ. ಆದರೆ ಈಗ ಜಾನುವಾರುಗಳಿಗೆ ಚರ್ಮ ಗಂಟು ರೋಗ (Lumpy skin disease virus) ಹೆಚ್ಚಾಗಿ ಬರುತ್ತಿದ್ದು, ಇದರಿಂದ ಜಾನುವಾರುಗಳು ಸಾವನ್ನಪ್ಪುತ್ತಿದೆ. ಚಿಕಿತ್ಸೆ ಕೊಡಿಸಿದರೂ ಕಮ್ಮಿಯಾಗದ ಹಿನ್ನೆಲೆ ರೈತರು ಜಾನುವಾರುಗಳಿಗೆ ಬಂದಿರುವ ರೋಗ ನಿವಾರಣೆ ಮಾಡುವಂತೆ ದೇವರ ಮೊರೆ ಹೋಗಿದ್ದಾರೆ.
ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಅಜ್ಜಿ ಹಬ್ಬ ಮಾಡುವ ಮೂಲಕ ತಮ್ಮ ಜಾನುವಾರುಗಳಿಗೆ ಬಂದಿರುವ ರೋಗ ಆದಷ್ಟು ಬೇಗ ಗುಣಮುಖವಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವತೆ ಉಚ್ಚಂಗಮ್ಮನಿಗೆ ಪೂಜೆ ಸಲ್ಲಿಕೆ ಮಾಡಿ ಎಡೆ ಇಟ್ಟು ರೈತರು ಭಕ್ತಿಯಿಂದ ಬೇಡಿಕೊಂಡರು. ಕಳೆದ ಎರಡ್ಮೂರು ತಿಂಗಳುಗಳಿಂದ ನಿರಂತರವಾಗಿ ಜಾನುವಾರುಗಳಿಗೆ ರೋಗ ಹೆಚ್ಚಾಗಿದ್ದು, ಅದರಲ್ಲೂ ಚರ್ಮ ಗಂಟು ರೋಗ ಹೆಚ್ಚಾಗಿದ್ದು, ಜಾನುವಾರುಗಳು ಸಾವನ್ನಪ್ಪುತ್ತಿವೆ. ಈ ರೋಗ ನಿವಾರಣೆ ಮಾಡುವಂತೆ ರೈತರು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ
ಅಲ್ಲದೇ ಬೇವಿನ ಸೊಪ್ಪು, ಹೋಳಿಗೆ, ಕಾಯಿ, ಹಣ್ಣು ಇಟ್ಟು ಜಾನುವಾರುಗಳಿಗೆ ಬಂದೋದಗಿದ ರೋಗ ನಿವಾರಣೆಯಾಗಿ ಜಾನುವಾರುಗಳು ಗುಣಮುಖವಾಗುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ಹಲವು ದಶಕಗಳಿಂದ ಈ ಸಂಪ್ರದಾಯ ವಾಡಿಕೆಯಲ್ಲಿದ್ದು, ಜನ ಜಾನುವಾರುಗಳಿಗೆ ಏನಾದರೂ ರೋಗ ಬಂದರೆ ಅಜ್ಜಿ ಹಬ್ಬ ಮಾಡಿ ಎಡೆ ಇಟ್ಟು, ಊರಿನ ಹೊರಗೆ ಇಟ್ಟು ಬರುತ್ತಾರೆ. ಇದರಿಂದ ರೋಗ ನಮ್ಮ ಗ್ರಾಮದಿಂದ ಹೊರ ಹೋಗಲಿದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಇದನ್ನೂ ಓದಿ: ಜೆಡಿಎಸ್ ಸೇರ್ಪಡೆ ಆಗ್ತಾರಾ ಕೆಜಿಎಫ್ ಬಾಬು? – ಕುತೂಹಲ ಮೂಡಿಸಿದ ಇಬ್ರಾಹಿಂ-ಕೆಜಿಎಫ್ ಬಾಬು ಭೇಟಿ