ದಾವಣಗೆರೆ ಬಿಜೆಪಿ ಸಂಘರ್ಷಕ್ಕೆ ಮದ್ದು – ರೇಣುಕಾಚಾರ್ಯ ಅಂಡ್ ಟೀಮ್‌ಗೆ ಬುಲಾವ್

Public TV
1 Min Read
Prahlad Joshi 1

ಬೆಂಗಳೂರು: ಬಿಜೆಪಿ ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಸರತ್ತು ಮುಂದುವರೆಸಿದ್ದಾರೆ. ನಾಳೆ ಪ್ರಹ್ಲಾದ್ ಜೋಶಿ ಅವರು ಬಿಜೆಪಿ ಕಚೇರಿಯಲ್ಲಿ ದಾವಣಗೆರೆ (Davanagere) ಬಿಜೆಪಿ ನಾಯಕರ ಸಂಘರ್ಷ ಬಗೆಹರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ದಾವಣಗೆರೆ ಬಿಜೆಪಿ ಗೊಂದಲ ಬಗ್ಗೆ ಶುಕ್ರವಾರ ಪ್ರಹ್ಲಾದ್ ಜೋಶಿ ಅವರು ಮಾಜಿ ಸಚಿವ ರೇಣುಕಾಚಾರ್ಯ (Renukacharya) ಮತ್ತು ತಂಡದ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ರೇಣುಕಾಚಾರ್ಯ ಮತ್ತು ತಂಡಕ್ಕೆ ನಾಳೆಯ ಸಭೆಗೆ ಈಗಾಗಲೇ ಪ್ರಹ್ಲಾದ್ ಜೋಶಿ ಬುಲಾವ್ ನೀಡಿದ್ದಾರೆ. ಇದನ್ನೂ ಓದಿ: ಸಿಎಸ್‌ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹೇಳಿಕೆ – ನಾಳೆ ಜೋಷಿಗೆ ಸ್ಪಷ್ಟನೆ

ಇತ್ತೀಚೆಗಷ್ಟೇ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದ ಮಾಜಿ ಸಂಸದ ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ ಹರೀಶ್, ದಾವಣಗೆರೆ ಲೋಕಸಭೆ ಸೋಲಿಗೆ ರೇಣುಕಾಚಾರ್ಯ ಮತ್ತು ತಂಡದ ಅಡ್ಜಸ್ಟ್ಮೆಂಟ್ ಕಾರಣ ಎಂದು ದೂರು ಕೊಟ್ಟಿದ್ದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

ಕಳೆದೊಂದು ವರ್ಷದಿಂದಲೂ ನಡೆಯುತ್ತಿರುವ ಜಟಾಪಟಿಗೆ ಈಗ ಹೈಕಮಾಂಡ್ ಸೂಚನೆ ಮೇರೆಗೆ ಪ್ರಹ್ಲಾದ್ ಜೋಶಿ ಅವರು ಮದ್ದು ಅರೆಯಲು ಮುಂದಾಗಿದ್ದಾರೆ. ಹೀಗಾಗಿ ನಾಳೆ ರೇಣುಕಾಚಾರ್ಯ ಜೊತೆ ಪ್ರಹ್ಲಾದ್ ಜೋಶಿ ಅವರು ಚರ್ಚಿಸಿ ಬುದ್ಧಿ ಮಾತು ಹೇಳಿ ಎಚ್ಚರಿಕೆ ನೀಡಲಿದ್ದಾರೆ.

Share This Article