ದಾವಣಗೆರೆ: ಜಿಲ್ಲೆಯ ಕುಟುಂಬವೊಂದಕ್ಕೆ ಇದ್ದದ್ದು ಕೇವಲ ಒಂದು ಎಕ್ರೆ 20 ಗುಂಟೆ ಜಮೀನು ಮಾತ್ರ. ಅದು ಕೂಡ 40 ವರ್ಷಗಳಿಂದ ಗೋಮಾಳ ಜಮೀನನ್ನ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದ್ರೆ ಈ ಭಾಗದ ಎಂಎಲ್‍ಎ ಮಾತ್ರ, ಆ ಜಾಗಕ್ಕೆ ಕಣ್ಣು ಹಾಕಿ, ಬಡವರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ ಅಂತಾ ಕುಟುಂಬವೊಂದು ಆರೋಪ ಮಾಡಿದೆ.
Advertisement
ಹೌದು. ದಾವಣಗೆರೆಯ ದೊಡ್ಡರಂಗವ್ವನಹಳ್ಳಿಯ ಯೋಗೇಂದ್ರ ನಾಯ್ಕ ಹಾಗೂ ಸುಮಾ ಕುಟುಂಬಕ್ಕೆ ಇದ್ದಿದ್ದು ಕೇವಲ 1 ಎಕ್ರೆ 20 ಗುಂಟೆ ಜಮೀನು ಮಾತ್ರ. ಕಳೆದ 40 ವರ್ಷಗಳಿಂದ ಈ ಜಮೀನನ್ನ ಉಳುಮೆ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಈ ಭಾಗದ ಎಂಎಲ್‍ಎ ಶಿವಮೂರ್ತಿ ನಾಯ್ಕ ಈ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಅಲ್ಲದೇ ಉಪಯೋಗಕ್ಕೆ ಬಾರದ ಪಶು ಚಿಕಿತ್ಸಾ ಕೇಂದ್ರ ಮಾಡೋಕೆ ಹೊರಟಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಈ ಕುಟುಂಬ ವಿಷ ಕುಡಿದು ಸಾಯೋದಕ್ಕೆ ಹೊರಟಿದೆ.
Advertisement
Advertisement
ದೊಡ್ಡರಂಗವ್ವನಹಳ್ಳಿಯಲ್ಲಿ ಪಶುಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ. ಯಾಕಂದ್ರೆ ಆ ಗ್ರಾಮದಲ್ಲಿ ಇರುವುದು ಕೇವಲ 40ರಿಂದ 50 ದನಗಳು ಮಾತ್ರ. ಆದ್ರೆ ಪಕ್ಕದಲ್ಲೇ ನೇರ್ಲಿಗೆ ಗ್ರಾಮಕ್ಕೆ ಪಶು ಚಿಕಿತ್ಸ ಕೇಂದ್ರದ ಅಗತ್ಯತೆ ಇತ್ತು. ಆದ್ರೆ ಅಲ್ಲಿ ಮಾಡೋದು ಬಿಟ್ಟು ಶಾಸಕರು ಈ ಕುಟುಂಬದ ಜಮೀನಿಗೆ ಕೈ ಹಾಕ್ತಿರೋದು ಇದೀಗ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.