ದಾವಣಗೆರೆ: ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅರೋಪಿಯನ್ನು ಬಂಧಿಸಲು ಡಾಗ್ ಸ್ಕ್ವಾಡ್ ಕ್ರೈಂ ವಿಭಾಗದ ಶ್ವಾನ ತಾರಾ (Dog Thara) ಸಹಾಯ ಮಾಡಿದೆ.
ಕೊಲೆ ನಡೆದ ಸ್ಥಳದಿಂದ 8 ಕಿಲೋಮೀಟರ್ ಕ್ರಮಿಸಿ ಆರೋಪಿಯನ್ನು ತಾರಾ ಪತ್ತೆ ಮಾಡಿದೆ. ಈ ಮೂಲಕ ಇದೀಗ ತಾರಾಗೆ ಪೊಲೀಸ್ ಇಲಾಖೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಳೆದ ಭಾನುವಾರ ಸೋಮಶೆಟ್ಟಿಹಳ್ಳಿ ಕ್ರಾಸ್ ಬಳಿ ಹಳೆಯ ದ್ವೇಷದ ಹಿನ್ನೆಲೆ ಕೊಲೆ ನಡೆದಿತ್ತು. ನರಸಿಂಹ ಎಂಬಾತನನ್ನು ಶಿವಯೋಗೀಶ್ ಕೊಲೆ ಮಾಡಿದ್ದ. ಕೊಲೆ ಮಾಡಿ ಆರೋಪಿ ಶ್ರೀರಾಮನಗರದಲ್ಲಿರುವ ಮನೆಯಲ್ಲಿ ಅವಿತು ಕೂತಿದ್ದ. ಇತ್ತ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದರು. ಇದನ್ನೂ ಓದಿ: ಗೂಡ್ಸ್ ವಾಹನ ಡಿಕ್ಕಿಯಾಗಿ ಮಕ್ಕಳಿಬ್ಬರ ದುರ್ಮರಣ
ಅಂತೆಯೇ ಶ್ವಾನ ತಾರಾ ಆರೋಪಿಯು ಕೊಲೆಗೆ ಬಳಸಿದ್ದ ಕಟ್ಟಿಗೆಯನ್ನು ಮೂಸಿ ನೋಡಿ ಕೊಲೆಗಾರನ ಜಾಡು ಹಿಡಿದಿದೆ. ಈ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]