ದಾವಣಗೆರೆ: ವಿಶ್ವ ವಿರಳ ರೋಗ ದಿನಾಚರಣೆ ಪ್ರಯುಕ್ತ ದಾವಣಗೆರೆಯಲ್ಲಿ ಇಂದು ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿರು. ನಗರದ ಹಿಮೊಫಿಲಿಯಾ ಸೊಸೈಟಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ವಾಕಥಾನ್‍ಗೆ ನಟ ವಿಜಯ ರಾಘವೇಂದ್ರ ಚಾಲನೆ ನೀಡಿದ್ದಾರೆ.
Advertisement
ಬಳಿಕ ಮಾತನಾಡಿದ ನಟ, ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಸಮಾಜದಲ್ಲಿ ಅತಿ ವಿರಳವಾಗಿ ಬರುವಂತಹ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಅಲ್ಲದೆ ತಂದೆ-ತಾಯಂದಿರು ಈ ಕಾರ್ಯಕ್ರಮದಿಂದ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ, ಗರ್ಭಿಣಿಯಾದಾಗಲೇ ಮಗುವಿಗೆ ಚಿಕಿತ್ಸೆ ಕೊಡಿಸುವಂತಹ ಕೆಲಸ ಮಾಡಬೇಕು. ಈ ವಾಕಥಾನ್ ನಲ್ಲಿ ಭಾಗವಹಿಸಿದ್ದು ನನಗೆ ಸಂತೋಷವಾಗಿದೆ. ಇಲ್ಲಿ ಕೇವಲ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯವಲ್ಲ. ನಿಮ್ಮ ಜೊತೆ ನಾವು ಇದ್ದೀವಿ ಎನ್ನುವ ಧೈರ್ಯ ನೀಡುತ್ತೇವೆ ಅಲ್ವ ಅದು ಮುಖ್ಯ. ಕಾಯಿಲೆಗೆ ತುತ್ತಾಗಿರುವವರಿಗೆ ನಾವು ಮಾನಸಿಕವಾಗಿ ಧೈರ್ಯ ತುಂಬಬೇಕಿದೆ ಎಂದು ತಿಳಿಸಿದರು.
Advertisement
Advertisement
ಕಾರ್ಯಕ್ರಮದಲ್ಲಿ 7ಸಾವಿರ ರೋಗಕ್ಕೆ 7 ಸಾವಿರ ಮೀಟರ್ ನಡಿಗೆ ಎನ್ನುವ ಮೂಲಕ ನೂರಾರು ಯುವಕ-ಯುವತಿಯರು ಭಾಗವಹಿಸಿದ್ದರು. ಅರಂಭಿಕವಾಗಿ ವಾರ್ಮಪ್ ಮಾಡಲು ಝುಂಭಾ ಕ್ಲಾಸ್ ನಡೆಸಿದ್ದು, ಡಿಜೆ ಸೌಂಟ್‍ಗೆ ರ್ಯಾಂಪ್ ಮೇಲೆ ಟ್ರೈನರ್ಸ್ ಮಾಡ್ತಾ ಇದ್ದರೆ, ಇತ್ತ ಕೆಳಗೆ ವಯಸ್ಸಾದವರಿಂದ ಹಿಡಿದು ಚಿಕ್ಕ ಮಕ್ಕಳ ತನಕ ಸಾಂಗ್ ಗೆ ಟ್ರೈನರ್ ಮಾಡ್ತಾ ಇರೋ ಹಾಗೇ ಡ್ಯಾನ್ಸ್ ಮಾಡಿದರು.
Advertisement
ಅಲ್ಲದೆ ನಟ ವಿಜಯ್ ರಾಘವೇಂದ್ರ ಅವರಿಗೆ ಹಿಮೊಫಿಲಿಯಾ ಸೊಸೈಟಿ ವತಿಯಿಂದ ಸನ್ಮಾನ ಹಮ್ಮಿಕೊಂಡಿದ್ದು, ಸಂಸದ ಜಿ ಎಂ ಸಿದ್ದೇಶ್ವರ್, ಎಸ್ ಪಿ ಹನುಮಾಂತರಾಯ ಸೇರಿದಂತೆ ಹಲವು ಗಣ್ಯರು ವಿಜಯ ರಾಘವೇಂದ್ರ ರವರಿಗೆ ಸನ್ಮಾನ ಮಾಡಿ ವಾಕಥಾನ್‍ಗೆ ಚಾಲನೆ ನೀಡಿದರು. ನಂತರ ಸ್ವಲ್ಪ ದೂರ ಅವರು ಕೂಡ ಯುವಕ ಯುವತಿಯರ ಜೊತೆ ಹೆಜ್ಜೆ ಹಾಕಿದರು. ಹಿಮೊಫಿಲಿಯಾ ಸೊಸೈಟಿಯಿಂದ ಪ್ರಾರಂಭಗೊಂಡು ಎಸ್‍ಎಸ್‍ಲೇ ಔಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಪಿಬಿ ರಸ್ತೆ, ಎವಿಕೆ, ರಾಮ್ ಆ್ಯಂಡ್ ಕೋ ಸರ್ಕಲ್ ಮೂಲಕ ಹಿಮೊಫಿಲಿಯಾ ಸೊಸೈಟಿಗೆ ಜಾಥ ತಲುಪಿತು. ಜಾಥದಲ್ಲಿ ಮೇಯರ್ ಬಿಜೆ ಅಜಯ್ ಕುಮಾರ್, ಎಸ್ಪಿ ಹನುಮಂತರಾಯ ಸೇರಿದಂತೆ ಹಲವರು ಸಾಥ್ ನೀಡಿದರು.
ಬಹುತೇಕ ರೋಗಗಳ ಅನುವಂಶೀಯವಾಗಿದ್ದು, ಈ ರೋಗಗಳ ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗಳಿಗೆ ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಆದ್ಯತೆ ನೀಡಿ ಸೂಕ್ತ ಚಿಕಿತ್ಸೆ ಕಂಡು ಹಿಡಿಯಲು ಪ್ರಯತ್ನಿಸಬೇಕು. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳನ್ನು ರಚಿಸಿ ಅವರ ಹಕ್ಕಿನ ರಕ್ಷಣೆಗಾಗಿ ಸಂಘಟಿತರಾಗಲು ಪ್ರೋತ್ಸಾಹ ನೀಡಬೇಕು ಎಂದು ಜಾಥಾ ಮೂಲಕ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲಾಯಿತು. ಈ ರೋಗದ ಬಗ್ಗೆ ಜನರಲ್ಲಿ, ಕುಟುಂಬಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.
ವಿಶ್ವದಲ್ಲಿ 7ಸಾವಿರ ವಿವಿಧ ವಿರಳ ರೋಗಗಳು ಇದ್ದು, ಸಾರ್ವಜನಿಕರಿಗೆ ಅರಿವಿನ ಕೊರತೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರೇಸ್ ಫಾರ್ 07 ಅಭಿಯಾನ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕರ್ನಾಟಕ ಹಿಮೊಫಿಲಿಯಾ ಸೊಸೈಟಿ ಕಾಯಕ ನಿಜಕ್ಕೂ ಮೆಚ್ಚುವಂತದ್ದಾಗಿದೆ.