– ನಾಮಪತ್ರ ಹಿಂದಕ್ಕೆ ಪಡೆಯದೇ ಕಣದಲ್ಲಿ ಉಳಿದ ಸಾದಿಕ್ ಪೈಲ್ವಾನ್
ನವದೆಹಲಿ: ರಾಜ್ಯದಲ್ಲಿ ಉಪಚುನಾವಣೆ (By Election) ಅಖಾಡ ರಂಗೇರಿದ್ದು ದಾವಣಗೆರೆ ದಕ್ಷಿಣ (Davanagere South) ಬಂಡಾಯದ ಬೇಗುದಿ ತಾರಕಕ್ಕೇರಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರುಗೆ (Samarth Shamanur) ಸಾದಿಕ್ ಪೈಲ್ವಾನ್ ಸೆಡ್ಡು ಹೊಡೆದು ನಿಂತಿದ್ದಾರೆ.
ನಾಮಪತ್ರ ಹಿಂಪಡೆಯಲು ಇಂದೇ ಕೊನೆ ದಿನವಾದ ಹಿನ್ನೆಲೆಯಲ್ಲಿ ಸಾದಿಕ್ ಪೈಲ್ವಾನ್ (Sadik Pailwan) ಅವರ ಮನವೊಲಿಸಲು ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಮನೆಗೆ ಬಂದಿದ್ದರು.
ರಾಜ್ಯ ನಾಯಕರು ಬಂದ ಕೂಡಲೇ ಸಾದಿಕ್ ಪೈಲ್ವಾನ್ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಸಿಟ್ಟು ಹೊರಹಾಕಿ “ಗೋ ಬ್ಯಾಕ್ ಗೋ ಬ್ಯಾಕ್” ಘೋಷಣೆ ಕೂಗಿದರು. ಈ ವೇಳೆ ಮುಸ್ಲಿಂ ಯುವಕರನ್ನು ಸಮಾಧಾನ ಕಾಂಗ್ರೆಸ್ ಮುಖಂಡರು ಸಮಾಧಾನ ಪಡಿಸಿದರು. ಇದನ್ನೂ ಓದಿ: ಬೆಳಗಾವಿಯ ನಾಯಕರಿಗೆ ಉಪಕದನ ಗೆಲ್ಲಿಸುವ ಜವಾಬ್ದಾರಿ – ಕಾಂಗ್ರೆಸ್ ಹೈಕಮಾಂಡ್ ಆದೇಶ
ನಿವಾಸದ ಒಳಗಡೆ ಹೋಗಿ ಸಾದಿಕ್ ಪೈಲ್ವಾನ್ ಅವರನ್ನು ಇಬ್ಬರು ನಾಯಕರು ಮನವೊಲಿಸಲು ಮುಂದಾದರು. ಆದರೆ ಸಾದಿಕ್ ಪೈಲ್ವಾನ್ ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ತೆಗೆಯುವುದಿಲ್ಲ ಎಂದು ಖಡಕ್ ಆಗಿ ಹೇಳಿದರು. ಇಷ್ಟು ಹೊತ್ತಿಗೆ ನಾಮಪತ್ರ ಹಿಂದಕ್ಕೆ ತೆಗೆಯುವ ಸಮಯವು ಮುಕ್ತಾಯ ಆಗಿದ್ದರಿಂದ ಕಣದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಸ್ಪರ್ಧಿಸುವುದು ಖಚಿತವಾಯಿತು.
ಈ ವೇಳೆ ಮಾತನಾಡಿದ ಸಾದಿಕ್ ಪೈಲ್ವಾನ್, ಮೊದಲೇ ರಾಜ್ಯ ನಾಯಕರು ಬಂದು ನಮ್ಮ ಅಹಿಂದ ಮುಖಂಡರು ಹಾಗೂ ನನ್ನ ಜೊತೆ ಸಭೆ ನಡೆಸಬೇಕಿತ್ತು. ನಾವು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದು ಪ್ರತಿಸ್ಪರ್ಧಿ ಅಲ್ಲ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇನೆ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಸವಾಲು ಎಸೆದಿದ್ದಾರೆ.

