– ಆದಿಲ್ ಬಾಷಾ ಜೊತೆ ಶಾಸಕ ಸಂಗಮೇಶ್ ಸುದೀರ್ಘ ಚರ್ಚೆ
ದಾವಣಗೆರೆ: ಇಲ್ಲಿನ ದಕ್ಷಿಣ ಕ್ಷೇತ್ರದ (Davanagere South) ಉಪಚುನಾವಣಾ (By Election) ಕದನದಿಂದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಿ ನಾಮಪತ್ರ ವಾಪಸ್ ಪಡೆದಿದ್ದ ಕಾಂಗ್ರೆಸ್ (Congress) ಈಗ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಮನವೊಲಿಕೆಗೆ ಮುಂದಾಗಿದೆ.
ಮತ ವಿಭಜನೆ ಆತಂಕದಲ್ಲಿ ಅಲ್ಪಸಂಖ್ಯಾತ ಯುವ ಮುಖಂಡ ಖಾದರ್ ಆದಿಲ್ ಬಾಷಾ ಮನವೊಲಿಕೆ ಯತ್ನ ನಡೆದಿದೆ. ಭದ್ರಾವತಿ ಶಾಸಕ ಸಂಗಮೇಶ್ (MLA Sangamesh) ಅವರನ್ನು ಆದಿಲ್ ಬಾಷ ಅವರ ಮನೆಗೆ ಕಾಂಗ್ರೆಸ್ ಹೈಕಮಾಂಡ್ ಕಳುಹಿಸಿತ್ತು. ದಾವಣಗೆರೆ ದೇವರಾಜ ಅರಸು ಬಡಾವಣೆಯ ಆದಿಲ್ ಅವರ ಮನೆಗೆ ತೆರಳಿದ್ದ ಶಾಸಕರು ಒಂದು ಗಂಟೆಗಳ ಕಾಲ ಮನವೊಲಿಕೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಪೈಲ್ವಾನ್‌ಗೂ ಮಣ್ಣು ಮುಕ್ಕಿಸುತ್ತೇವೆ – ಬೀದಿಗಿಳಿದು ಆಕ್ರೋಶ ಹೊರಹಾಕಿದ ಮುಸ್ಲಿಂ ಯುವಕರು
ಕಳೆದ ನಾಲ್ಕೈದು ದಿನಗಳಿಂದ ಸಿಎಂ ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ದಲಿತ ನಾಯಕರ ಜೊತೆಗೂಡಿ ಆದಿಲ್ ಪ್ರಚಾರ ನಡೆಸಿದ್ದಾರೆ. ಇದೇ ಹೊತ್ತಲ್ಲಿ ಸಾದಿಕ್ ಪೈಲ್ವಾನ್ ಅವರಿಗೆ ಬೆಂಬಲ ನೀಡಿದ್ದ ಬಹುತೇಕ ಅಲ್ಪಸಂಖ್ಯಾತ ಯುವಕರು, ನಾಯಕರು ಆದಿಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇದೇ ಕಾರಣಕ್ಕೆ ಸಾದಿಕ್ ಪೈಲ್ವಾನ್ ನಂತರ ಕಾಂಗ್ರೆಸ್‍ಗೆ ಆದಿಲ್ ಬಾಷಾ ತಲೆನೋವಾಗಿದ್ದಾರೆ. ಮತ ದ್ರುವೀಕರಣದ ಆತಂಕದಿಂದ ಎಚ್ಚೆತ್ತ ಕಾಂಗ್ರೆಸ್ ಮನವೊಲಿಕೆಗೆ ಕಸರತ್ತು ನಡೆಸುತ್ತಿದೆ. ಇದನ್ನೂ ಓದಿ: ನಮ್ಮ ಕ್ಷೇತ್ರದಲ್ಲಿ ಸಮರ್ಥ್‌ರನ್ನು ಗೆಲ್ಲಿಸುತ್ತೇವೆ – ಉಪಕದನದಿಂದ ಹಿಂದೆ ಸರಿದ ಪೈಲ್ವಾನ್

