ದಾವಣಗೆರೆ: ನಗರದಲ್ಲಿ (Davanagere) ವೈದ್ಯರೊಬ್ಬರಿಂದ 50,000 ರೂ. ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷನೊಬ್ಬ (Revenue Inspector) ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕನನ್ನು ಚಂದ್ರಪ್ಪ ಎಂದು ಗುರುತಿಸಲಾಗಿದೆ. ಈತ ಭೂಮಿ ಸರ್ವೇ ಮಾಡಲು ವೈದ್ಯರ ಬಳಿ 50,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಈತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ: ಗ್ಯಾಸ್ ಅಭಾವ – ಆಟೋ ಚಾಲಕರಿಗೆ ಸಣ್ಣಪುಟ್ಟ ಸಮಸ್ಯೆಯಾಗಿದೆ, ಮೋದಿ ದೊಡ್ಡ ಡ್ಯಾಮೇಜ್ ತಪ್ಪಿಸಿದ್ದಾರೆ: ಹೆಚ್‌ಡಿಕೆ
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ, ಡಿವೈಎಸ್‌ಪಿ ಕಲಾವತಿ ನೇತ್ರತ್ವದಲ್ಲಿ ಇನ್ಸ್‌ಪೆಕ್ಟರ್ ಗುರುಬಸವರಾಜ್ ಪ್ರಭು ಸೂರಿನ್ ಹಾಗೂ ಸರಳಾ ಅವರು ದಾಳಿ ನಡೆಸಿದ್ದರು. ಇದನ್ನೂ ಓದಿ: ಕಲಬುರಗಿಯಲ್ಲಿ ಹಿಟ್ & ರನ್ ಅಪಘಾತ ಪ್ರಕರಣಗಳಲ್ಲಿ 26 ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು

