– ಅನಾಮಿಕರು ಅಕ್ಕಿ ಸಂಗ್ರಹಿಸಿದ್ದಾರೆಂದು ಎಫ್‍ಐಆರ್
ದಾವಣಗೆರೆ: ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮೇಲೆ ದಾಳಿ ಮಾಡಿ ನಕಲಿ ಎಫ್‍ಐಆರ್ ಹಾಕಿದ್ದಾರೆಂಬ ಆರೋಪವೊಂದು ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿದೆ.
Advertisement
Advertisement
ದಾವಣಗೆರೆ ನಗರದ ಕೆ.ಆರ್ ರಸ್ತೆ ಬಳಿಯ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ವಿಚಾರ ತಿಳಿದ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ಹಾಗೂ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದು ಸುಮಾರು 250 ಪ್ಯಾಕೇಟ್ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಗೋದಾಮಿನಲ್ಲಿ ಬೃಹತ್ ಪ್ರಮಾಣದ ಅಕ್ಕಿ ಸಿಕ್ಕರೂ ನಕಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ. ಅಲ್ಲದೆ ಅನಾಮಿಕರು ಅಕ್ಕಿ ಸಂಗ್ರಹಿಸಿದ್ದಾರೆಂದು ಎಫ್‍ಐಆರ್ ದಾಖಲು ಮಾಡಿದ್ದಾರೆ. ಈ ಮೂಲಕ ಪಡಿತರ ಅಕ್ಕಿ ದಂಧೆಕೋರರಿಗೆ ಅಧಿಕಾರಿಗಲೇ ಸಾಥ್ ಕೊಡ್ತಿದ್ದಾರಾ ಎಂಬ ಅನುಮಾನವೊಂದು ಮೂಡಿದೆ.
Advertisement
ಗೋದಾಮಿನ ಮಾಲೀಕನ ವಿರುದ್ಧ ಎಫ್‍ಐಆರ್ ಮಾಡೋದು ಬಿಟ್ಟು ಯಾರೋ ಅನಾಮಿಕ ಅಂತ ಎಫ್‍ಐಆರ್ ಮಾಡಿದ್ದಾರೆ. ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತನಿಖೆ ನಡೆಸಿ ದಂಧೆಕೋರರ ವಿರುದ್ಧ ಎಫ್‍ಐಆರ್ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ದಂಧೆಕೋರರ ಜೊತೆ ಶಾಮೀಲಾಗಿ ತಹಶೀಲ್ದಾರ್ ಅವರೇ ಡಮ್ಮಿ ಎಫ್‍ಐಆರ್ ಮಾಡಿದ್ರಾ?, ಅಲ್ಲದೆ ಡಮ್ಮಿ ಎಫ್‍ಐಆರ್ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೀತಾ ಎಂಬ ಪ್ರಶ್ನೆಗಳು ಮೂಡಿವೆ.