ದಾವಣಗೆರೆ: ವೈದ್ಯರ ಎಡವಟ್ಟಿನಿಂದಾಗಿ ವೃದ್ಧೆಯೊಬ್ಬರು 20 ದಿನ ನರಳಿ ನರಳಿ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ವೃದ್ಧೆಯನ್ನು ಅನ್ನಪೂರ್ಣಮ್ಮ(65) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರ ವಿರುದ್ಧ ಅನ್ನಪೂರ್ಣಮ್ಮ ಕುಟುಂಬದವರು ಕಿಡಿಕಾರುತ್ತಿದ್ದಾರೆ. ತಾಯಿ ಜೀವ ಕಳೆದಿದ್ದಾನೆ ಎಂದು ವೃದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕೆಆರ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ದೀಪಕ್ ಬೊಂದಡೆಯನ್ನು ಪೊಲೀಸರು ಸುರಕ್ಷಿತವಾಗಿ ಹೊರ ಕಳಿಸಿದರು.
Advertisement
Advertisement
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅನ್ನಪೂರ್ಣಮ್ಮ ಅವರನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಆಸ್ಪತ್ರೆಗೆ ದಾಖಲಿಸಿಕೊಂಡು ವೈದ್ಯ ದೀಪಕ್ ಬೊಂದಡೆ, ವೃದ್ಧೆಯ ಹೊಟ್ಟೆ ಕೊಯ್ದು ಹಾಗೆಯೇ ಬಿಟ್ಟಿದ್ದಾನೆ. ಹೀಗೆ ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿಲ್ಲ. ಇದನ್ನೂ ಓದಿ: ವೃದ್ಧೆಯ ಹೊಟ್ಟೆ ಕೊಯ್ದು ಹಾಗೆ ಬಿಟ್ಟ – ವೈದ್ಯನ ಯಡವಟ್ಟಿಗೆ ವೃದ್ಧೆ ನರಳಾಟ
Advertisement
Advertisement
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ. ಯಾವುದೇ ಬಿಲ್ ನೀಡದೆ 3 ಲಕ್ಷಕ್ಕೂ ಅಧಿಕ ಬಿಲ್ ಕಟ್ಟಿಸಿಕೊಂಡಿದ್ದರು. ಈ ಮಧ್ಯೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ವೃದ್ಧೆಯ ಮಕ್ಕಳು ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು.
15 ದಿನಗಳಿಂದ ಅನ್ನಪೂರ್ಣಮ್ಮ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷದಿಂದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಖಾಸಗಿ ಆಸ್ಪತ್ರೆಯ ಮುಂದೆ ಮೃತದೇಹವನ್ನು ಇಟ್ಟು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.