ದಾವಣಗೆರೆ: ನಗರದ (Davanagere) ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ (Women) ಶವ ಪತ್ತೆಯಾಗಿದ್ದು, ತಂದೆಯೊಂದಿಗೆ ಸೇರಿ ಕೈ ತುತ್ತು ತಿಂದ ಮಕ್ಕಳೇ ಮಹಿಳೆಯನ್ನು ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೃತ ಮಹಿಳೆಯನ್ನು ಸುಮಲತಾ ಎಂದು ಗುರುತಿಸಲಾಗಿದೆ. ಶಿವಮೂರ್ತಿ 12 ವರ್ಷಗಳ ಹಿಂದೆ ಮೊದಲನೇ ಪತ್ನಿ ಸಾವನ್ನಪ್ಪಿದ ಬಳಿಕ ಸುಮಲತಾಳನ್ನು ಮದುವೆಯಾಗಿದ್ದ. ಆಕೆಗೆ ಮಕ್ಕಳಿರಲಿಲ್ಲ, ಪತಿಯ ಮೊದಲ ಹೆಂಡತಿಯ ಮೂರು ಮಕ್ಕಳನ್ನ ಪಾಲನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಳು. ಇದೀಗ ಪತಿ ಹಾಗೂ ಮಕ್ಕಳ ವಿರುದ್ಧ ಸುಮಲತಾ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.
ಸುಮಾಲತಾ ತನ್ನ ಮಕ್ಕಳಂತೆ ಮೂವರನ್ನೂ ನೋಡಿಕೊಂಡಿದ್ದಳು. ಆದರೆ ಮಕ್ಕಳು ದೊಡ್ಡವರಾದ ಮೇಲೆ ಜಗಳ ಶುರುವಾಗಿದೆ. ಓರ್ವ ಸುಮಲತಾ ಜೊತೆ ಆರು ತಿಂಗಳು ಮಾತು ನಿಲ್ಲಿಸಿದ್ದ. ಅಲ್ಲದೇ ಮಕ್ಕಳು ದೊಡ್ಡವರಾದ ಬಳಿಕ ಶಿವಮೂರ್ತಿ ಪತ್ನಿಗೆ ಕಿರುಕುಳ ನೀಡಲು ಶುರು ಮಾಡಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.