ದಾವಣಗೆರೆ: ರಸ್ತೆಯಲ್ಲಿ ಬೈಕ್ ಚಲಿಸುತ್ತಿದ್ದಾಗ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೇ ಬೈಕ್ ಚಲಾಯಿಸುತ್ತಿದ್ದ ಪಾಲಿಕೆ ಸದಸ್ಯನೊಬ್ಬರಿಗೆ ಯಮ ಕಿಂಕರರೇ ಆಗಮಿಸಿ ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಜಯದೇವ ಸರ್ಕಲ್‍ನಲ್ಲಿ ಸಂಚಾರಿ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನಾಚರಣೆಯ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಯಮ ಕಿಂಕರರ ವೇಷಭೂಷಣಗಳನ್ನು ಹಾಕಿಸಿ, ರಸ್ತೆ ಸಂಚಾರ ನಿಯಮಗಳನ್ನು ವಿನೂತನವಾಗಿ ಜನರಿಗೆ ಹಾಗೂ ಸವಾರರಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಯಮಕಿಂಕರರು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಪಾಶ ಹಾಕಿ ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳುತ್ತಿದ್ದರು.
Advertisement
Advertisement
ಅದೇ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಎ ನಾಗರಾಜ್ ರನ್ನು ಹಿಡಿದ ಯಮ ಕಿಂಕರರು, ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳಿದರು.
Advertisement
ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದರೆ ನನ್ನ ಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ವಾಹನ ಸವಾರರಿಗೆ ಹೆದರಿಸಿದರು. ಇದಕ್ಕೆ ಇನ್ನೊಮ್ಮೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದಿಲ್ಲ ಎಂದು ಹೇಳಿ ಪಾಲಿಕೆ ಸದಸ್ಯ ಅಲ್ಲಿಂದ ಹೊರಟು ಹೋದರು. ಹೀಗೆ ಇನ್ನೂ ಕೆಲಕಾಲ ಹಾಸ್ಯದ ವಾತವರಣ ಸೃಷ್ಟಿಯಾಗಿತ್ತು.