ದಾವಣಗೆರೆ: ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಆಯೋಜಿಸಿದ್ದ ಟಗರು ಕಾಳಗಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಟಗರು ಕಾಳಗ ನಡೆಸಲಾಗುತ್ತಿದ್ದು, ಎರಡು ಟಗರುಗಳ ಕೊಂಬು ಹಿಡಿದು ಪರಸ್ಪರ ಕಾದಾಡುವಂತೆ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರೇರೆಪಿಸಿದರು. ಈ ಮೊದಲು ಟಗರು ಕಾಳಗಕ್ಕೆ ಚಾಲನೆ ನೀಡುವ ವೇಳೆ ಎರಡು ಟಗರುಗಳ ಕೊಂಬು ಹಿಡಿದು ಕೆಲ ಹೊತ್ತು ನಿಂತಿದ್ದರು. ಇದನ್ನೂ ಓದಿ: ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಡಿಚ್ಚಿ ಹೊಡೆದ ರಿಯಲ್ ಹೋರಿ
Advertisement
Advertisement
ಟಗರುಗಳು ಕಾಲನ್ನು ಎಳೆದು ಕಾಳಗ ಶುರು ಮಾಡುವುದು ಮಾಮೂಲಿ. ಆದರೆ ಶಾಸಕ ರೇಣುಕಾಚಾರ್ಯ ಅವರು ಕೊಂಬನ್ನು ಹಿಡಿದಿದ್ದಾಗ ಏಕಾಏಕಿ ಒಂದು ಟಗರು ಬಂದು ಡಿಚ್ಚಿ ಹೊಡೆಯಿತು. ಈ ವೇಳೆ ಎಚ್ಚೆತ್ತ ಶಾಸಕರು ಬೇಗನೇ ಕೈಯನ್ನು ಹಿಂತೆಗೆದುಕೊಂಡರು. ಹೀಗಾಗಿ ಯಾವುದೇ ಗಾಯವಾಗಲಿಲ್ಲ. ಇದನ್ನೂ ಓದಿ: ಮತ್ತೊಮ್ಮೆ ಹೋರಿಯಿಂದ ತಪ್ಪಿಸಿಕೊಂಡ ರೇಣುಕಾಚಾರ್ಯ
Advertisement
ರೇಣುಕಾಚಾರ್ಯ ಅವರು ಇತ್ತೀಚೆಗೆ ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳ ಮಾರ್ಗವಾಗಿ ಹೊಸದಾಗಿ ಕೆಎಸ್ಆರ್‌ಟಿಸಿ ಬಸ್ ಚಾಲನೆಯ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಸ್ವತಃ ತಾವೇ ಚಾಲಕನ ಯೂನಿಫಾರಂ ಹಾಕಿಕೊಂಡು ಗ್ರಾಮಗಳಿಗೆ ಬಸ್ ಚಲಾಯಿಸಿದ್ದರು. ಈ ದೃಶ್ಯವನ್ನು ಬೆಂಬಲಿರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಡಿಸಿ ಟಿ.ಆರ್.ನವೀನ್ ಕುಮಾರ್ ಘಟನೆಯ ಬಗ್ಗೆ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದರು.