ದಾವಣಗೆರೆ: ಜಪಾನ್ ನಲ್ಲಿ ಪ್ರವಾಸಿಗರನ್ನು ಸೆಳೆಯಲು ಮಾಡುವ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭಾರತದ ದೇಶಿ ಭತ್ತದ ತಳಿ ಬಳಸಿ ಜನರಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವ ಸಾರುವ ಸ್ವಚ್ಛ ಭಾರತ ಮಿಷನ್ ನ ಲಾಂಛನ ರಚಿಸುವ ಮೂಲಕ ಜಿಲ್ಲೆಯ ಪ್ರಗತಿಪರ ರೈತ ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಕುಂಬಳೂರು ಗ್ರಾಮದಲ್ಲಿ ರೈತ ಅಂಜನೇಯ ರಚಿಸಿರುವ ಪ್ಯಾಡಿ ಆರ್ಟ್‍ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆಯ ಬಗ್ಗೆ ಹೀಗೆ ಭತ್ತದ ಗದ್ದೆಯಲ್ಲೂ ಜಾಗೃತಿ ಮೂಡಿಸಬಹುದು ಎಂಬುದನ್ನ ರೈತ ಅಂಜನೇಯ ತೋರಿಸಿಕೊಡುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.
Advertisement
Advertisement
ಅಂಜನೇಯ ಅವರು ಸಿದ್ದಸಣ್ಣ ಹಾಗೂ ಡಾಂಬರ ಸಾಳಿ ಎಂಬ ಎರಡು ದೇಶಿ ತಳಿಯ ಭತ್ತವನ್ನ ಬಳಸಿ ಸ್ವಚ್ಛ ಭಾರತ ಮಿಷನ್ ಲಾಂಛನವನ್ನ ಮಾಡಿದ್ದಾರೆ. ಗಾಂಧೀಜಿ ಕನ್ನಡಕವಿರುವ ಸ್ವಚ್ಛ ಭಾರತ ಮಿಷನ್ ಲೋಗೋ ಮಾಡಿದ್ದು, ಅದೇ ರೀತಿ ಸಿದ್ದ ತಳಿಯ ಹಸಿರು ಹಾಸಿನ ಮಧ್ಯೆ ಡಾಂಬರ್ ಸಾಳಿ ಬತ್ತದ ತಳಿ ಬಳಸಿ ಕಪ್ಪು ಬಣ್ಣದ ಕನ್ನಡಕದ ಚಿತ್ರ ಕಾಣುವಂತೆ ಮಾಡಿದ್ದಾರೆ. ಈ ವಿಚಾರ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಕೂತುಹಲ ಮೂಡಿಸಿದೆ. ಅಷ್ಟೇ ಅಲ್ಲದೆ ರೈತ ಆಂಜನೇಯ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವಥಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಸಾವಯವ ಕೃಷಿ ಮಾಡುವಲ್ಲಿ ನನಗೆ ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳು ಕೈ ಜೋಡಿಸಿದ್ದಾರೆ. 2006 ರಿಂದಲೂ ಮೂರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದೆ. ಇಂದಿಗೂ ಇಲ್ಲಿ ಯಾವುದೇ ರಾಸಯನಿಕ ಗೊಬ್ಬರ ಬಳಸದೆ ಸ್ವಾವಲಂಬಿ ರೈತನಾಗಿದ್ದೇನೆ. ಅಲ್ಲದೇ ಜಪಾನ್ ನಲ್ಲಿ ಟೂರಿಂಗ್ ಗಾಗಿ ಭತ್ತದ ಗದ್ದೆಯಲ್ಲಿ ಚಿತ್ರಗಳನ್ನು ಮೂಡಿಸುತ್ತಾರೆ. ಆದರೆ ಅಲ್ಲಿ ಕೇವಲ 8 ಬಣ್ಣದ ಭತ್ತದ ತಳಿಗಳು ಮಾತ್ರ ಇವೆ. ನಮ್ಮ ದೇಶದಲ್ಲಿ 13 ಬಣ್ಣದ ವಿವಿಧ ತಳಿಯ ಭತ್ತದ ತಳಿಗಳಿವೆ ಎಂದು ಅಂಜನೇಯ ತಿಳಿಸಿದ್ದಾರೆ.
Advertisement
ಅಂಜನೇಯ ನಶಿಸಿ ಹೋಗುತ್ತಿರುವ ದೇಶಿ ಭತ್ತದ ತಳಿಗಳ ಶೋಧಕರಾಗಿದ್ದು, ಅಪರೂಪದ ತಳಿಗಳನ್ನ ಹುಡುಕಿ ಅಭಿವೃಧ್ದಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಾವಯವ ರೈತ ಸ್ವಚ್ಛ ಭಾರತ ಮಿಷನ್ ಲೋಗೋ ಬಳಸಿ ಸ್ವಚ್ಛತೆಗೆ ಮಾದರಿಯಾಗಿ ತಮ್ಮ ಹೊಲದಲ್ಲಿ ಗಾಂಧೀಜಿ ಕನ್ನಡಕದ ಚಿತ್ರ ಮೂಡುವಂತೆ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಯುವ ರೈತನ ಕಾರ್ಯಕ್ಕೆ ಜಿಲ್ಲೆಯ ರೈತರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.