DavanagereDistrictsKarnatakaLatestMain Post

ದ್ಯಾವಮ್ಮನ ಜಾತ್ರೆಗಾಗಿ ಇಡೀ ಗ್ರಾಮಕ್ಕೆ ಮುಳ್ಳಿನ ಬೇಲಿ- ದಾವಣಗೆರೆಯಲ್ಲಿ ಶತಮಾನಗಳ ಸಂಪ್ರದಾಯ ಇನ್ನೂ ಜೀವಂತ

ದಾವಣಗೆರೆ: ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತರಲು ಹರಸಾಹಸ ಮಾಡುತ್ತಿದೆ. ಲಾಕ್ ಡೌನ್ ಅಸ್ತ್ರಕ್ಕೂ ಮುಂದಾದರೂ ಅಚ್ಚರಿ ಪಡಬೇಕಿಲ್ಲ. ಹೆಚ್ಚು ಜನ ಸೇರಬೇಡಿ. ಜಾತ್ರೆ ಉತ್ಸವ ಮಾಡಬೇಡಿ ಎಂದು ಹೇಳುತ್ತಲೇ ಇದೆ. ಆದರೆ ಜನ ಮಾತ್ರ ಕೇಳುತ್ತಿಲ್ಲ. ಆದ್ರೆ ಇಲ್ಲೊಬ್ಬ ದೇವಿ ಇದ್ದಾಳೆ. ದೇವಿಯೇ ಕೊರೊನಾದಿಂದ ಭಕ್ತರನ್ನ ಕಾಪಾಡುವ ಸಂಕಲ್ಪ ಮಾಡಿದ್ದಾಳೆ. ಒಂಬತ್ತು ದಿನಗಳ ಕಾಲ ತಾನು ನೆಲೆಸಿದ ಗ್ರಾಮವನ್ನೇ ಲಾಕ್ ಮಾಡಿದ್ದಾಳೆ. ಹೊರಗಿನವರು ಒಳಗೆ ಹೋಗುವಂತಿಲ್ಲ. ಒಳಗೆ ಇದ್ದವರು ಹೊರಗೆ ಹೋಗುವಂತಿಲ್ಲ.

ಹೌದು. ದಾವಣಗೆರೆಯ ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ದ್ಯಾವಮ್ಮನ ಜಾತ್ರೆ ಅಂದರೆ ಊರಿಗೇ ಊರೇ ಸಂಭ್ರಮಿಸುತ್ತೆ. ಆದರೆ ಇಲ್ಲಿ ಯಾಕೆ ಮುಳ್ಳಿನ ಬೇಲಿ ಹಾಕಿದ್ದಾರೆ ಅಂದುಕೊಳ್ಳುತ್ತಿದ್ದರೆ ಅದಕ್ಕೊಂದು ಕಾರಣ ಇದೆ. ಕಕ್ಕರಗೊಳ್ಳ ಗ್ರಾಮದಲ್ಲಿ ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ದ್ಯಾವಮ್ಮನ ಜಾತ್ರೆಯಲ್ಲಿ ಇಡೀ ಗ್ರಾಮದಲ್ಲಿ 9 ದಿನಗಳ ಕಾಲ ಮುಳ್ಳಿನ ಬೇಲಿ ಹಾಕಿ ದಿಗ್ಬಂಧನ ಹಾಕಲಾಗುತ್ತೆ. ಈ ನವದಿನಗಳು ಯಾರೂ ಗ್ರಾಮದಿಂದ ಹೊರ ಹೋಗುವಂತಿಲ್ಲ. ಹೀಗಾಗಿ ಸರ್ಕಾರಿ ಕೆಲಸಗಾರು, ಶಾಲೆ-ಕಾಲೇಜಿಗೆ ಹೋಗುವವರು ಈ 9 ದಿನಗಳ ಕಾಲ ಊರ ಹೊರಗಿನ ಸಂಬಂಧಿಕರ ಮನೆಯಲ್ಲಿರುತ್ತಾರೆ.

ಈ ಸಂಪ್ರದಾಯವನ್ನು ಮೀರಿದವರಿಗೆ ಈ ಹಿಂದೆ ಕೆಲವು ಆಪತ್ತುಗಳು ಎದುರಾಗಿದೆ. ಅಲ್ಲದೆ ಈ 9 ದಿನಗಳ ಅವಧಿಯಲ್ಲಿ ಗ್ರಾಮದಲ್ಲೇ ಯಾರೇ ಸಾವನ್ನಪ್ಪಿದ್ರೂ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲ್ಲ. ಗ್ರಾಮದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುತ್ತೆ. ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ- ಅನಿಲ್ ಬೆನಕೆ ವಿರುದ್ಧ ಕೇಸ್

ನಮ್ಮ ಸರ್ಕಾರ ಕೊರೊನಾ ಕಂಟ್ರೋಲ್‍ಗಾಗಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿ ಮಾಡಿದ್ರೂ ಜನರು ನಿಯಮ ಉಲ್ಲಂಘಿಸ್ತಾರೆ. ಆದರೆ ಈ ಗ್ರಾಮದಲ್ಲಿ 9 ದಿನಗಳ ಕಾಲ ಸ್ಥಳೀಯರು ಚಾಚುತಪ್ಪದೇ ಸಂಪ್ರದಾಯವನ್ನು ಪಾಲಿಸ್ತಾರೆ. ಅದು ಇಲ್ಲಿನ ಜನರ ನಂಬಿಕೆಯೂ ಆಗಿದೆ.

Leave a Reply

Your email address will not be published.

Back to top button