ದಾವಣಗೆರೆ: ಕಾಲಭೈರವನ ಆರಾಧಕರಾದ ಡಿಕೆಶಿ ತಂದೆ-ತಾಯಿ ಅವರಿಗೆ ಶಿವಕುಮಾರ್ ಎಂದು ಹೆಸರಿಟ್ಟರೆ ಡಿಕೆಶಿ ಮಾತ್ರ ಏಸು ಕುಮಾರನಾಗಲು ಹೊರಟಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆಶಿ ಕಾಲಭೈರವನ ಬೆಟ್ಟದಲ್ಲಿ ಅದರಲ್ಲೂ ಸರ್ಕಾರಿ ಗೋಮಾಳದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದಾರೆ. ಡಿಕೆಶಿ ತಂದೆ ತಾಯಿ ಶಿವನ ಆರಾಧನೆ ಮಾಡುತ್ತಾರೆ. ಅವರು ಇಂತಹ ಸುಪುತ್ರನನ್ನು ಪಡೆಯಲು ಪುಣ್ಯ ಮಾಡಿರಬೇಕು. ಶಿವ ಎಂದು ಹೆಸರಿಟ್ಟರೆ ಇವರು ಮಾತ್ರ ಏಸು ಕುಮಾರನಾಗಲು ಹೊರಟಿದ್ದಾರೆ ಎಂದರು.
ಇನ್ನು ಮುಂದೆ ಡಿಕೆ ಶಿವಕುಮಾರ್ ಹೆಸರು ಬೇಡ. ಏಸು ಕುಮಾರ ಎಂದು ನಾವೇ ನಾಮಕರಣ ಮಾಡಿ ಬಿಡೋಣಾ ಎಂದು ಡಿಕೆಶಿ ವಿರುದ್ಧ ವ್ಯಂಗ್ಯವಾಡಿದರು. ಡಿಕೆಶಿ ಇಡೀ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಪವಿತ್ರವಾದ ಕಾಲಭೈರವನ ಬೆಟ್ಟದಲ್ಲಿ ಏಸುವಿನ ವಿಗ್ರಹ ಮಾಡಲು ಹೊರಟಿದ್ದೀರಲ್ಲ. ಅದರಲ್ಲೂ ಸರ್ಕಾರಿ ಜಾಗದಲ್ಲಿ ನಿರ್ಮಿಸಲು ಹೊರಟ ನಿಮ್ನನ್ನು ಏನು ಎಂದು ಕರೆಯಬೇಕು ಎಂದು ಕಿಡಿಕಾರಿದರು.
ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಕಟ್ಟಲು ವಿರೋಧ ಮಾಡಿದರು. ವಲ್ಲಬಾಯಿ ಪಟೇಲ್ ಪ್ರತಿಮೆ ನಿರ್ಮಾಣ ಮಾಡಿದಾಗ ವಿರೋಧ ಮಾಡಿದರು. ನಾವು ಕಾಲಭೈರವನ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಬಿಡೋದಿಲ್ಲ ಎಂದು ಎಂಪಿ ರೇಣುಕಾಚಾರ್ಯ ತಿಳಿಸಿದರು.