Connect with us

Davanagere

ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ದಾವಣಗೆರೆ ಜಿಲ್ಲಾಸ್ಪತ್ರೆ!

Published

on

ದಾವಣಗೆರೆ: ವೈದ್ಯರು ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಹೊರ ಹಾಕಿದ ಮನಕಲುಕುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದ ಗಂಗುಬಾಯಿ ಎಂಬುವರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದು ಜೂನ್ 9 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬೆಳಗ್ಗೆ ಡಿಸ್ಚಾರ್ಜ್ ಲೆಟರ್ ವೈದ್ಯರು ಕೊಟ್ಟಿದ್ದರು.

ಆದ್ರೆ ಅನಕ್ಷರಸ್ಥರಾದ ಕಾರಣ ಈ ವಿಚಾರ ರೋಗಿ ಹಾಗೂ ಜೊತೆಗಿದ್ದ ಮಹಿಳೆಗೆ ತಿಳಿದಿರಲಿಲ್ಲ. ಹೀಗಾಗಿ ಸಂಜೆ ಬಂದ ವೈದ್ಯರು ನೀವ್ಯಾಕೆ ಇನ್ನೂ ಆಸ್ಪತ್ರೆಯಲ್ಲಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ರಾತ್ರಿಯಾಯ್ತು ಇನ್ನು ಬಸ್ ಸಿಗಲ್ಲ ಅಂತ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ವೈದ್ಯರು ರಾತ್ರಿ ಏಕಾಏಕಿ ಹೊರ ಹಾಕಿದ್ದಾರೆ. ರಾತ್ರೋರಾತ್ರಿ ಆಸ್ಪತ್ರೆ ಬಿಟ್ಟು ಹೊರ ಬಂದ ರೋಗಿಗಳು ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದರು.

ಈ ದೃಶ್ಯವನ್ನು ಕಂಡ ಅಲ್ಲೇ ಇರುವ ಅಂಬುಲೆನ್ಸ್ ಚಾಲಕ ಅಜೇಯ್ ಇವರ ಸ್ಥಿತಿಯನ್ನು ನೋಡಿ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಿದ್ರು. ಮಾನವೀಯತೆ ಇಲ್ಲದಂತೆ ವರ್ತಿಸಿದ ಜಿಲ್ಲಾಸ್ಪತ್ರೆಯ ವೈದ್ಯರ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತರಬೇತಿ ನಿರತ ವೈದ್ಯರುಗಳು ರೋಗಿಯನ್ನು ಹೊರಹಾಕಿದ್ದಾರೆ. ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇನ್ನು ಮುಂದೆ ಇಂತಹ ಘಟನೆ ನಡೆಸದಂತೆ ಪಿಜಿ ವೈದ್ಯರಿಗೆ ಎಚ್ಚರಿಕೆ ನೀಡುವುದಾಗಿ ರಾತ್ರಿ ಉಸ್ತುವಾರಿ ವಹಿಸಿಕೊಂಡಿದ್ದ ವೈದ್ಯ ಪ್ರಕಾಶ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *