ದಾವಣಗೆರೆ: ಅಫ್ರಿಕಾದ (Africa) ಚೇಡಾಕ್ಕೆ ಗಿಡಮೂಲಿಕೆ ಮಾರಾಟಕ್ಕೆ ತೆರಳಿದ್ದ ರಾಜ್ಯದ ಹಕ್ಕಿಪಿಕ್ಕಿ ಜನಾಂಗದ 8 ಮಂದಿಯ ಪಾಸ್‌ಪೋರ್ಟ್‌ನ್ನು ಅಲ್ಲಿಯ ಪೊಲೀಸರು ವಶಕ್ಕೆ ಪಡೆಸಿಕೊಂಡಿದ್ದಾರೆ. ಪಾಸ್ ಪೋರ್ಟ್ ವಾಪಸ್ ಕೊಡಲು 1500 ಡಾಲರ್ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.
ಗಿಡಮೂಲಿಕೆ ಔಷಧಿ ಸೇರಿದಂತೆ ಹಲವು ಆಯುರ್ವೇದ ಔಷಧ ಮಾರಾಟಕ್ಕೆ ಹಕ್ಕಿಪಿಕ್ಕಿ ಜನಾಂಗದವರು ತೆರಳಿದ್ದರು. ಶಿವಮೊಗ್ಗದ (Shivamogga) ಹಕ್ಕಿಪಿಕ್ಕಿ ಕ್ಯಾಂಪ್‌ನ ಐದು ಜನ, ದಾವಣಗೆರೆಯ (Davanagere) ಗೋಪನಾಳ್ ಗ್ರಾಮದ ಇಬ್ಬರು. ಚಿಕ್ಕಮಗಳೂರಿನ (Chikkamagaluru) ಮಲ್ಲೇನಹಳ್ಳಿಯ ಒಬ್ಬರು ಸಿಲುಕಿಕೊಂಡಿದ್ದಾರೆ. ಇವರೆಲ್ಲ ಕಳೆದ ಒಂದು ವರ್ಷದ ಹಿಂದೆ ಸೆಂಟ್ರಲ್ ಆಫ್ರಿಕಾಕ್ಕೆ ತೆರಳಿದ್ದರು. ಇದನ್ನೂ ಓದಿ: ಗಬಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು – ಹಕ್ಕಿಪಿಕ್ಕಿ ಸಮುದಾಯದ ನಾಟಿ ವೈದ್ಯರಿಗೆ ದೇಶ ತೊರೆಯಲು ಸೂಚನೆ
ಕೂಡಲೇ ನಮ್ಮನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆದುಕೊಂಡು ಹೋಗಿ ಎಂದು ಹಕ್ಕಿಪಿಕ್ಕಿ ಜನಾಂಗದ ತಂಡ ವಿಡಿಯೋ ಮಾಡಿ ಮನವಿ ಮಾಡಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಂಜನಗೂಡು | ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ – ಮಗು ಸೇರಿ ಮೂವರಿಗೆ ಗಾಯ

