ನೂತನ ಮನೆಗೆ ಮೋದಿ ಹೆಸರಿಟ್ಟ ಚನ್ನಗಿರಿಯ ಅಭಿಮಾನಿ

Public TV
1 Min Read
davanagere narendra modi home

ದಾವಣಗೆರೆ: ತಮ್ಮ ಮಗಳಿಗಾಗಿ ಮನೆ ನಿರ್ಮಾಣ ಮಾಡಿದ ಓರ್ವ ಅಭಿಮಾನಿ ತಮ್ಮ ನಿವಾಸಕ್ಕೆ ನರೇಂದ್ರ ಮೋದಿ ನಿಲಯ ಎಂದು ಹೆಸರಿಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೆಲ್ಸ್‍ನಲ್ಲಿ ನೆಲೆಸಿರುವ ಪುತ್ರಿ ಭುವನೇಶ್ವರಿ ಅವರಿಗಾಗಿಯೇ ಚನ್ನಗಿರಿಯಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ನೂತನ ಮನೆ ನಿರ್ಮಾಣ ಮಾಡಿದ ಹಾಲೇಶ್ ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದರಿಂದ ತಮ್ಮ ನಿವಾಸಕ್ಕೆ ನರೇಂದ್ರ ಮೋದಿ ನಿಲಯ ಎಂದು ನಾಮಕರಣ ಮಾಡಿದ್ದಾರೆ.

davanagere narendra modi home 1

ಮನೆ ನಿರ್ಮಾಣ ಮಾಡಿದ ಹಾಲೇಶ್ ಹೆಸರಿಡಲು ಹುಡುಕಾಟ ನಡೆಸಿದ್ದರಂತೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಿಟ್ಟು ಅದಕ್ಕೆ ನಾಮಫಲಕ ಕೂಡ ಹಾಕಿಸಿದ್ದಾರೆ. ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಮನೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೂಡ ಹಾಲೇಶ್ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಇದೀಗ ಹಾಲೇಶ್ ಅವರ ಮನೆ ಸಾರ್ವಜನಿಕರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಇದನ್ನು ಗಮನಿಸಿದ ಅಕ್ಕಪಕ್ಕದ ಗ್ರಾಮಸ್ಥರು ಮನೆಗೆ ಭೇಟಿ ನೀಡಿ ಮನೆಯನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರೇ ಅಮಿತ್‌ ಶಾ ಗುಲಾಮರಾಗಬೇಡಿ, ಕನ್ನಡ ತಾಯಿ ಸ್ವಾಭಿಮಾನಿ ಮಕ್ಕಳಾಗಿ: ಸಿದ್ದು

davanagere narendra modi home 2

ಪ್ರಧಾನಿ ಮೋದಿಯವರ ಹೆಸರಿಟ್ಟಿರುವ ನಿವಾಸ ಮೇ 3ರಂದು ಗೃಹಪ್ರವೇಶ ಆಗಲಿದ್ದು, ಮನೆ ಉದ್ಘಾಟನೆಗೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತಿತ್ತರರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ನೂತನ ಮನೆಗೆ ಸಹ್ಯಾದ್ರಿ ಅಥವಾ ಶಿವಾಜಿ ಎಂದು ಹೆಸರಿಡಲು ಇಚ್ಚಿಸೆದ್ದೆವು, ನಾನು ಪಕ್ಕ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದರಿಂದ ನರೇಂದ್ರ ಮೋದಿ ನಿಲಯ ಎಂದು ಹೆಸರಿಟ್ಟಿದ್ದೇವೆ. ಇನ್ನು ಮನೆ ಮುಂದೇ ಅವರ ಭಾವಚಿತ್ರ ಇರಿಸಿ ಹೆಸರು ಕೆತ್ತಲಾಗಿದೆ ಎಂದು ಮನೆ ಮಾಲೀಕ ಹಾಲೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಮವಾರದಿಂದಲೇ 6-12 ವರ್ಷದ ಮಕ್ಕಳಿಗೆ ಲಸಿಕೆಗೆ ಸಿದ್ಧತೆ: ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *