ದಾವಣಗೆರೆ: ಯತ್ನಾಳ್ ಅವರನ್ನು ಬಿಜೆಪಿಯಿಂದ (BJP) ಉಚ್ಚಾಟಿಸಬೇಕು ಎಂಬ ಕೂಗು ಪಕ್ಷದಲ್ಲಿ ಕೇಳಿ ಬಂದ ಬೆನ್ನಲ್ಲೇ, ದಾವಣಗೆರೆಯಲ್ಲೂ (Davanagre) ಮಾಜಿ ಸಚಿವ ರೇಣುಕಾಚಾರ್ಯರನ್ನು (M.P Renukacharya) ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಕೂಗು ಕೇಳಿಬಂದಿದೆ.
ಇದೇ ವಿಚಾರಕ್ಕೆ ಬಿಜೆಪಿಯ ಸಿದ್ದೇಶ್ವರ್ ಹಾಗೂ ರೇಣುಕಾಚಾರ್ಯರ ಬೆಂಬಲಿಗರ ನಡುವೆ ಟಾಕ್ ವಾರ್ ನಡೆದಿದೆ. ಈ ವೇಳೆ ಸಿದ್ದೇಶ್ವರ್ ತಂಡದಿಂದ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯರನ್ನು ಉಚ್ಚಾಟನೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂತೋಷ್ ಜೀ ಅವರನ್ನು ಹೀನಾಯವಾಗಿ ನಿಂದಿಸಿದ್ದಾರೆ. ಬಿಎಸ್‍ವೈ ಮಾನಸ ಪುತ್ರ ಎಂದು ಹೇಳಿ ಅವರ ವಿರುದ್ಧವೇ ಬಂಡಾಯ ಮಾಡಿದ್ದು ರೇಣುಕಾಚಾರ್ಯ. ಇಂತಹ ಜೋಕರ್‌ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಸಿದ್ದೇಶ್ವರ್ ಬಣದ ನಾಯಕರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ರೇಣುಕಾಚಾರ್ಯ ಪರ ಅವರ ಬೆಂಬಲಿಗರು ಬ್ಯಾಟಿಂಗ್ ಮಾಡಿದ್ದು, ಕೋವಿಡ್ ಸಂದರ್ಭದಲ್ಲಿ ರೇಣುಕಾಚಾರ್ಯ ಮಾಡಿದ ಕೆಲಸಕ್ಕೆ ವಿರೋಧ ಪಕ್ಷಗಳು ಸೇರಿದಂತೆ ದೇಶ ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂತಹ ರಾಜ್ಯ ಮಟ್ಟದ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ. ಏನಾದರೂ ಹೀಗೆ ಮುಂದುವರೆದರೆ ಸರಿ ಇರೋದಿಲ್ಲ ಎಂದು ರೇಣುಕಾಚಾರ್ಯ ಬೆಂಬಲಿಗರು ಸಿದ್ದೇಶ್ವರ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.