ದಾವಣಗೆರೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ, ಒಡೆದ ಮನೆಯಲ್ಲಿ ಮೈತ್ರಿ ಸರ್ಕಾರ ಸಂಸಾರ ನಡೆಸುತ್ತಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿಯ ಮಾಜಿ ಸಚಿವ ಹಾಲಿ ಶಾಸಕ ಶ್ರೀರಾಮುಲು ವ್ಯಂಗ್ಯ ಮಾಡಿದ್ದಾರೆ.
ಹರಿಹರದ ವಾಲ್ಮೀಕಿ ಮಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ. ಒಡೆದ ಮನೆಯಲ್ಲಿ ಯಾವ ರೀತಿ ಸಂಸಾರ ಮಾಡಲು ಆಗುವುದಿಲ್ಲವೋ, ಅದೇ ರೀತಿ ಸರ್ಕಾರ ನಡೆಸಲು ಸಾಧ್ಯವಿಲ್ಲ. ಒಡೆದ ಮನೆಯಲ್ಲಿ ಸಮ್ಮಿಶ್ರ ಸರ್ಕಾರ ಸಂಸಾರ ಮಾಡುತ್ತಿದೆ. ಅದು ಬಹಳ ದಿನ ಇರೋಲ್ಲ ಎಂದು ಭವಿಷ್ಯ ನುಡಿದರು.
ಆಪರೇಷನ್ ಕಮಲ ಮಾಡಲು ನಾವು ಕೈ ಹಾಕುವುದಿಲ್ಲ. ಹೈಕಮಾಂಡ್ ಅಪರೇಷನ್ ಕಮಲದಿಂದ ದೂರವಿರಿ ಎಂದು ಸೂಚನೆ ನೀಡಿದೆ. ಅಪರೇಷನ್ ಕಮಲ ಬದಲಿಗೆ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ತಲೆ ಕೆಡೆಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.
ಬಿಜೆಪಿಯವರು ಬರ ಪ್ರವಾಸ ಮಾಡುತ್ತಿದ್ದು, ಜನರ ಸಮಸ್ಯೆ ಅಲಿಸುತ್ತಿದ್ದೇವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರು ಕೂಡ ಅದರ ಬಗ್ಗೆ ಸಮ್ಮಿಶ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಅರಾಜಕತೆ ಸೃಷ್ಟಿಯಾಗಿದ್ದು. ಅಲ್ಲಿನ ಶಾಸಕರು, ಸಚಿವರು ಕುಣಿದು ಕುಪ್ಪಳಿಸುತ್ತಾರೆ ಎಂದು ಶಾಸಕರು ಕಿಡಿಕಾರಿದ್ರು.