– ದಾವಣಗೆರೆಯಲ್ಲಿ ಹುಣ್ಣಿಮೆ ದಿನ ಜೋಗಮ್ಮನ ಜಾದು
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಮಾಟ ಮಂತ್ರ, ವಶೀಕರಣವನ್ನು ಅಷ್ಟಾಗಿ ಯಾರೂ ನಂಬಲ್ಲ. ಆದರೂ ಇಲ್ಲೊಂದು ಕಡೆ ಅಮವಾಸ್ಯೆ ಹುಣ್ಣಿಮೆ ದಿನದಂದು ವಶೀಕರಣ ನಡೆಯುತ್ತದೆ. ಶ್ರೀಮಂತ ಯುವಕರೇ ಇವರ ಟಾರ್ಗೆಟ್ ಆಗಿದೆ.
ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಬಸವಯ್ಯ ಅವರು ನಮ್ಮ ಮಗನನ್ನು ಬಿಟ್ಟು ಬಿಡು ಎಂದು ಜೋಗಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಹಲವು ವರ್ಷಗಳಿಂದ ಮಕ್ಕಳ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದರು. ಇವರ ಎರಡನೇ ಮಗ ಮಿಥುನ್ ಚಕ್ರವರ್ತಿ ಕೆಇಬಿಯಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ನಗರದ ಯರಗುಂಟೆ ಬಳಿ ಯಾವುದೋ ಕಾಂಟ್ಯ್ರಾಕ್ಟ್ ಕೆಲಸಕ್ಕೆ ಹೋಗಿದ್ದನು. ಅಲ್ಲಿಯೇ ಶಕುಂತಲಾ ಎನ್ನುವ ಜೋಗಮ್ಮ ಪರಿಚಯವಾಗಿ ನಿನ್ನ ಪಲ್ಸರ್ ಬೈಕ್‍ಗೆ ದೆವ್ವ ಹಿಡಿದಿದೆ. ನಾನು-ನೀನು ಕಳೆದ ಜನ್ಮದಲ್ಲಿ ಹಾವುಗಳಾಗಿದ್ವಿ ಆ ದೋಷ ಹೋಗಬೇಕು ಎಂದರೆ ಪೂಜೆ ಮಾಡಬೇಕು ಎಂದು ಹೇಳಿ ಪೂಜೆ ಮಾಡಿಸಿ ವಶೀಕರಣ ಮಾಡಿಕೊಂಡಿದ್ದಾರೆ.
Advertisement
Advertisement
ಎಷ್ಟರ ಮಟ್ಟಿಗೆ ಎಂದರೆ ಪೋಷಕರು ಹೋಗಿ ಮಿಥುನ್‍ನನ್ನು ಕರೆದರೆ, ಅವರನ್ನು ಹೊಡೆದು ಹೊರ ಹಾಕುವಷ್ಟೂ ವಶೀಕರಣ ಮಾಡಿಕೊಂಡಿದ್ದಾಳೆ. ಇದರಿಂದ ಮಿಥುನ್ ಚಕ್ರವರ್ತಿಯ ಪೋಷಕರು ಆಕೆಯನ್ನು ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
Advertisement
Advertisement
ಮಿಥುನ್‍ಗೆ ಜೋಗಮ್ಮ ಪರಿಚಯವಾದಾಗಿನಿಂದ ವಿಚಿತ್ರವಾಗಿ ವರ್ತಿಸಲು ಶುರುಮಾಡಿಕೊಂಡಿದ್ದಾನೆ. ಅಮವಾಸ್ಯೆ, ಹುಣ್ಣಿಮೆಯ ದಿನ ಚಿತ್ರ ವಿಚಿತ್ರವಾದ ಪೂಜೆ ಮಾಡುತ್ತಿದ್ದನು. ಹೊಸದಾಗಿ ತೆಗೆದುಕೊಂಡ ಪಲ್ಸರ್ ಬೈಕ್ ಯರಗುಂಟೆಯಲ್ಲಿರುವ ಜೋಗಮ್ಮನ ಮನೆಯ ಮುಂದೆಯೇ ನಿಲ್ಲಿಸಿ ಸ್ನೇಹಿತರ ಬೈಕ್‍ನಲ್ಲಿ ಓಡಾಡುತ್ತಿದ್ದನು. ತಮ್ಮ ಮಗನನ್ನು ಬಿಡಿಸಿಕೊಡಿ ಎಂದು ಪೋಷಕರು ಬೇಡಿಕೊಂಡ್ರು ಯಾವುದೇ ಪ್ರಯೋಜನವಾಗಿಲ್ಲ ಎಂದು ಯುವಕನ ಸ್ನೇಹಿತ ಬಾಬು ಹೇಳಿದ್ದಾರೆ.
ಒಟ್ಟಿನಲ್ಲಿ ಆಧುನಿಕ ಯುಗದಲ್ಲಿ ಇಂತಹ ಘಟನೆಗಳು ನಂಬಲು ಸಾಧ್ಯವಾಗದಿದ್ದರೂ ಇಲ್ಲಿನ ಪರಿಸ್ಥಿತಿ ನೋಡಿದರೆ ಆ ಜೋಗಮ್ಮ ಯಾವ ರೀತಿ ಯುವಕನ ತಲೆ ಕೆಡೆಸಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಈಗಲಾದರೂ ಸಂಬಂಧಪಟ್ಟವರು ಇವರ ಸಮಸ್ಯೆಯನ್ನು ನಿವಾರಿಸಿ ಎಂದು ಯುವಕನ ಪೋಷಕರು ಅಂಗಲಾಚುತ್ತಿದ್ದಾರೆ.