ಬೆಂಗಳೂರು: ಮಗಳ ದಿನದ ಅಂಗವಾಗಿ ಹಲವರು ತಮ್ಮ ಮುದ್ದಿನ ಮಗಳಿಗೆ ವಿವಿಧ ರೀತಿಯಲ್ಲಿ ಶುಭ ಕೋರುವ ಮೂಲಕ ಆಚರಿಸುತ್ತಿದ್ದಾರೆ. ಅದೇ ರೀತಿ ಇದೀಗ ನಟ ಯಶ್ ಸಹ ಮಗಳೊಂದಿಗೆ ಕಾಲ ಕಳೆಯುತ್ತಿರುವ ಕ್ಯೂಟ್ ಫೋಟೋ ಹಂಚಿಕೊಂಡು, ಭಾವನಾತ್ಮಕ ಸಾಲು ಬರೆದು ಶುಭ ಕೋರಿದ್ದಾರೆ.
View this post on Instagram
Advertisement
ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಐರಾಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಯಾವಾಗಲೂ ನಿನ್ನ ಮಾತನ್ನು ಕೇಳುತ್ತ ಇರಬಲ್ಲೆ. ನೀನು ನಮ್ಮ ಆಶೀರ್ವಾದ ಮಗಳೆ. ಪ್ರಪಂಚದ ಅದ್ಭುತ ಹೆಣ್ಣುಮಕ್ಕಳಿಗೆ ಹ್ಯಾಪಿ ಡಾಟರ್ಸ್ ಡೇ. ನೀನು ಜೀವನವನ್ನು ವಿಶೇಷವಾಗಿಸಿರುವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್
Advertisement
Advertisement
ಫೋಟೋದಲ್ಲಿ ಐರಾ ಹಾಗೂ ಯಶ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದಾರೆ. ಈ ವಿಶೇಷ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಯಶ್ ಮಗಳಿಗೆ ಶುಭ ಕೋರಿದ್ದಾರೆ. ಯಶ್ ಆಗಾಗ ತಮ್ಮ ಮಕ್ಕಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಗಣೇಶ ಹಬ್ಬದ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೂ ಮೊದಲು ಯಥರ್ವ್ ಹಾಗೂ ಐರಾ ಕುಣಿದು ಕುಪ್ಪಳಿಸುತ್ತಿದ್ದ ಫೊಟೋಗಳನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ
Advertisement
ಹೀಗೆ ಯಶ್ ಸಿನಿಮಾ ಕೆಲಸದ ಜೊತೆಗೆ ಕುಟುಂಬಕ್ಕೂ ಸಮಯ ನೀಡುತ್ತಾರೆ. ಮಕ್ಕಳು ಹಾಗೂ ಕುಟುಂಬದವರೊಂದಿಗೆ ಎಂಜಾಯ್ ಮಾಡುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಶೂಟಿಂಗ್‍ಗೆ ಬ್ರೇಕ್ ಬಿದ್ದಿದ್ದರಿಂದ ಸಂಪೂರ್ಣ ಸಮಯವನ್ನು ಮಕ್ಕಳೊಂದಿಗೆ ಕಳೆದಿದ್ದಾರೆ.
ಕೆಜಿಎಫ್-2 ಬಿಡುಗಡೆ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಈಗಾಗಲೇ ಡೇಟ್ ಕೂಡ ಅನೌನ್ಸ್ ಆಗಿದ್ದು, ಏಪ್ರಿಲ್ 14, 2022ಕ್ಕೆ ಕೆಜಿಎಫ್-2 ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.